ಬುಧವಾರ ಕೊಪ್ಪಳ ನಗರಕ್ಕೆ ವಿಧಾನ ಪರಿಷತ್ ಸದಸ್ಯ ಬಿ.ಎಮ್.ಎಲ್ ಕಾಂತರಾಜ್

bl-kantaraj-mlc

ದಿ ೨೪ ಬುಧವಾರದಂದು ಕರ್ನಾಟಕ ಜನತಾದಳ (ಜಾತ್ಯಾತೀತ) ಪಕ್ಷದ ಕೊಪ್ಪಳ ಜಿಲ್ಲಾ ವೀಕ್ಷಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಿ.ಎಮ್.ಎಲ್ ಕಾಂತರಾಜ್ ಮತ್ತು ಜಿಲ್ಲಾ ವೀಕ್ಷಕರಾದ ಧಯಾನಂದ, ಮತ್ತು ನಾಗರಾಜು ಹಾಗು ಪಕ್ಷದ ಅಧ್ಯಕ್ಷ ಪ್ರದೀಪ್‌ಗೌಡ ಮಾಲಿಪಾಟೀಲ್ ರವರು ಬುಧವಾರದಂದು ಬೆಳಿಗ್ಗೆ ೯.೦೦ ಗಂಟೆಗೆ ನಗರದ ಶ್ರೀ ಗವಿಸಿದ್ಧೇಶ್ವರ ಮಠಕ್ಕೆ ಹಾಗೂ ಫೀರ್‌ಪಾಷಾ ದರ್ಗಾ ಪಲ್ಟಾನ್ ಗಲ್ಲಿ ಮತ್ತು ಹಳೇ ಸರಕಾರಿ ಆಸ್ಪತ್ರೆ ಹತ್ತಿರದ ಚರ್ಚ್ ಗೆ ಬೇಟಿನೀಡಿ ಆಶಿರ್ವಾದ ಪಡೆದು ನಂತರ ೧೦.೦೦ಕ ಮಹಾಂತಯ್ಯನಮಠ ಕಲ್ಯಾಣ ಮಂಟಪಕ್ಕೆ ಆಗಮಿಸಿ ಜೆ.ಡಿ.ಎಸ್. ಜಿಲ್ಲಾ ಸಭೆಯಲ್ಲಿ ಪಾಲ್ಗೊಳ್ಳುವರು. ಈ ಸಭೆಗೆ ಜೆ.ಡಿ.ಎಸ್. ನ ಎಲ್ಲಾ ತಾಲೂಕಿನ ಮುಖಂಡರು, ಪದಾಧಿಕಾರಿಗಳು, ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ್, ಹಾಗೂ ಗ್ರಾಮ ಪಂಚಾಯತ ನ ಚುನಾವಣೆಗೆ ಸ್ಪರ್ಧಿಸಿದಂತ ಎಲ್ಲಾ ಕಾರ್ಯಕರ್ತರು ಸಭೆಗೆ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಪಕ್ಷದ ಜಿಲ್ಲಾ ವಕ್ತಾರ ಮೌನೇಶ ಎಸ್. ವಡ್ಡಟ್ಟಿ  ತಿಳಿಸಿದ್ದಾರೆ.

Leave a Reply