ಬೀದಿ ನಾಟಕ ಯಶಸ್ವಿ

street_play_koppalಕೊಪ್ಪಳ : ತಾಲೂಕಿನ ಗ್ರಾಮದಲ್ಲಿ ಹುಲಿಗಿಯಲ್ಲಿ ಶ್ರೀ ಹುಲಿಗೆಮ್ಮ ದೇವಿ ಜಾತ್ರೆಯ ಅಂಗವಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ದೇವದಾಸಿ ಪುರವಸತಿ ಜಿಲ್ಲಾ ಯೋಜನಾ ಕೇಂದ್ರ ಇವರ ಸಹಯೋಗದಲ್ಲಿ ಬೀದಿ ನಾಟಕವನ್ನು ಆಯೋಜಿಸಲಾಗಿತ್ತು.
ಈ ನಾಟಕವನ್ನು ಶ್ರೀಮತಿ ಸುಧಾ ಚಿದ್ರಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಈ ಒಂದು ದೇವದಾಸಿ ಪದ್ದತಿಗೆ ಸರ್ಕಾರ ಸಾಕಷ್ಟು ಸೌಲಭ್ಯವನ್ನು ನೀಡಿದೆ ಆದ್ದರಿಂದ ಈ ಅನಿಷ್ಟ ಪದ್ದತಿಯನ್ನು ತೊಲಗಿಸಲು ಮುಂದಾಗಬೇಕು ಎಂದು ತಿಳಿಸಿದರು.
ಕಲಾ ತಂಡದ ನಾಯಕ ಶಿವಮೂರ್ತಿ ಮೇಟಿ ನಿರ್ದೇಶನದಲ್ಲಿ ಕಲಾವಿದರಾಗಿ ರಾಮನ್ಣ ವಾಲ್ಮೀಕಿ, ಕರೀಮಸಾಬ್ ನದಾಫ್, ಗ್ಯಾನೇಶ ಬಡಿಗೇರ, ಶಿವಕುಮಾg, ಇಮಾಮಸಾಬ್ ನದಾಪ್, ಅಂಬಮ್ಮ ಸಿಂದನೂರ, ನಿಂಗಮ್ಮ ಬಂಡಿ ಹರ್ಲಾಪೂರ ಕಲಾವಿದರಿಂದ ಬೀದಿ ನಾಟಕವು ಯಶಸ್ವಿಯಾಗಿ ಜರುಗಿತು.

Leave a Reply