ಬಿ.ಇಡಿ ಪ್ರಥಮ ಹಾಗೂ ತೃತೀಯ ಸೆಮಿಸ್ಟರ್‌ನ ಪರೀಕ್ಷಾ ಫಲಿತಾಂಶ ಪ್ರಕಟ

 

ಕೊಪ್ಪಳ: ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕಳೆದ ಜುಲೈ ತಿಂಗಳಲ್ಲಿ ನಡೆದ ಬಿ.ಇಡಿ ಪ್ರಥಮ ಹಾಗೂ ತೃತೀಯ ಸೆಮಿಸ್ಟರ್‌ನ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ನಗರದ ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪರೀಕ್ಷೆಗೆ ಹಾಜರಾದ ಬಿ.ಇಡಿ. ತೃತೀಯ ಸೆಮಿಸ್ಟರ್‌ನ ೭೦ ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಅದರಲ್ಲಿ ೬೭ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೦೩ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದು. ಮಹಾವಿದ್ಯಾಲಯದ ತೃತೀಯ ಸೆಮಿಸ್ಟರ್‌ನ ಫಲಿತಾಂಶ ೧೦೦% ಆಗಿರುತ್ತದೆ. ಮಹಾವಿದ್ಯಾಲಯಕ್ಕೆ ೬೦೦ ಅಂಕಗಳಿಗೆ ೫೧೫ (೮೫.೮೩%) ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ರೇಖಾ ಕಾವಲಿ, ೬೦೦ ಅಂಕಗಳಿಗೆ ೫೦೬ (೮೪.೩೩%) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು ಸುಮಲತಾ ಕಮ್ಮಾರ ಪಡೆದಿದ್ದಾರೆ.
ಅದೇ ರೀತಿ ಪರೀಕ್ಷೆಗೆ ಹಾಜರಾದ ಬಿ.ಇಡಿ. ಪ್ರಥಮ ಸೆಮಿಸ್ಟರ್‌ನ ೬೮ ವಿದ್ಯಾರ್ಥಿಗಳಲ್ಲಿ ೬೬ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಅದರಲ್ಲಿ ೪೬ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೨೦ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದು. ಮಹಾವಿದ್ಯಾಲಯದ ಪ್ರಥಮ ಸೆಮಿಸ್ಟರ್‌ನ ಫಲಿತಾಂಶ ೯೭.೦೫% ಆಗಿರುತ್ತದೆ. ಮಹಾವಿದ್ಯಾಲಯಕ್ಕೆ ೬೦೦ ಅಂಕಗಳಿಗೆ ೫೧೧ (೮೫.೧೬%) ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ಕಾಸೀಂಬಿ, ೬೦೦ ಅಂಕಗಳಿಗೆ ೫೦೮ (೮೪.೬೬%) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು ಮಂಜುಳಾ ಬಂಡಿ ಪಡೆದಿದ್ದಾರೆ.
ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಪೂಜ್ಯ ಶ್ರೀಗಳು, ಆಡಳಿತ ಮಂಡಳಿಯ ಕಾರ್ಯದರ್ಶಿಗಳು ಹಾಗೂ ಸದಸ್ಯರು ಮತ್ತು ಮಹಾವಿದ್ಯಾಲಯದ ಸಿಬ್ಬಂದಿವರ್ಗ ಅಭಿನಂದನೆ ಸಲ್ಲಿಸಿದ್ದಾರೆ

Please follow and like us:
error