fbpx

ಬಿಸಿಯೂಟ ನೌಕರರಿಗೆ ಪಿಂಚಣಿಗೆ ಆಗ್ರಹಿಸಿ ೨೧ರಂದು ಪ್ರತಿಭಟನೆ

ರಾಜ್ಯಸರ್ಕಾರ ಒಪ್ಪಿರುವ ಪಿಂಚಣಿ ಸೌಲಭ್ಯ ಕೊಡದೆ ಬಿಸಿಯೂಟ ನೌಕರರಿಗೆ ಮಾಡಿರುವ ದ್ರೋಹ

 ಮಾನವ ಸಂಪನ್ಮೂಲ ಇಲಾಖೆಯಡಿಯಲ್ಲಿ ಅಕ್ಷರದಾಸೋಹ ಯೋಜನೆ 2001 – 2002 ರಿಂದ ಪ್ರಾರಂಭವಾಗಿದೆ . ಇಂದಿನ ಸರ್ಕಾರಗಳು “ ಅಹಿ ಅನ್ನ ಆಗಬೇಕು ಅನ್ನಬೇಯಿಸಲು ತಗಲುವ ಖರ್ಚು ಮಾತ್ರ ನಮಗೆ ಸಂಭಂದಿಸಿದ್ದು ಅದರಲ್ಲಿರುವ ಉದ್ಯೋಗಿಗಳು ಲೆಕ್ಕಕ್ಕಿಲ್ಲ ಎನ್ನುವ ರೀತಿಯಲ್ಲಿ ಪರಿಗಣಿಸುತ್ತಿದ , ಕಳೆದ 17 ವರ್ಷಗಳಿಂದ ಈ ನೌಕರರಿಗೆ ಸೂಕ್ತವಾದ ವೇತನ ಪಿಂಚಣಿ ಹಾಗೂ ಇತರೆ ಯಾವುದೇ ಸೌಲಭ್ಯಗಳನ್ನು ನೀಡದೇ ಮೇಲಿನಿಂದ ಮೇಲೆ ಮೋಸ ಮಾಡುತ್ತಿದೆ . ಈ ವಿಷಯದ ಮೇಲೆ ಹಲವಾರು ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂದೆ ಹಲವು ಹೋರಾಟಗಳು ನಡೆದಿದೆ . ಮಕ್ಕಳ ಅಪೌಷ್ಟಿಕತೆಯನ್ನು ಹೋಗಲಾಡಿಸಲು ದುಡಿಯುವ ಈ ಮಹಿಳೆಯರಿಗೆ ಕೇವಲ 2600 ರಿಂದ 2700 ರೂ ತಿಂಗಳ ಸಂಬಳ ಬಿಟ್ಟರೆ ಬೇರಾವ ಸವಲತ್ತುಗಳು ಇಲ್ಲ . ಈಗಾಗಲೇ ಈ ಬಡಮಹಿಳೆಯರು ತಮ್ಮ ನಿವೃತ್ತಿ ಅಂಚಿನ ಆಸುವಾಸಿನಲ್ಲಿ ಇದ್ದಾರೆ . ರಾಜ್ಯದಲ್ಲಿ ಇರುವ 1 . 1800 ಮಹಿಳೆಯರು ಈ ಯೋಜನೆಯಡಿಯಲ್ಲಿ ದುಡಿಯುತ್ತಿದ್ದಾರೆ . ಈ ನೌಕರರ ಭವಿಷ್ಯ ನಿಧಿ ( ಪಿಂಚಣಿ ) ಗಾಗಿ ಕಳೆದ 13 / 06 / 16 , 409 / 17 ಮತ್ತು 4 / 10 / 18 ರಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ , ಎಲ್‌ಐಸಿ ಪಿಂಚಣಿ ವಿಭಾಗದ ಅಧಿಕಾರಿಗಳು , ಸಂಘಟನಾ ಮುಖಂಡರೊಂದಿಗೆ ಜಂಟಿ ಮಾತುಕತೆ ನಡೆದಿದ್ದು ಈ ಮಾತುಕತೆಯಲ್ಲಿ ಈ ನೌಕರರ ವೇತನದಲ್ಲಿ 100 ರೂಪಾಯಿ ಹಾಗೂ ಸರ್ಕಾರ ಇದಕ್ಕೆ 100 ರೂಪಾಯಿ ಕಡಿತ ಮಾಡಿ ಈ ಹಣವನ್ನು ಎಲ್ . ಐ . ಸಿ ಮುಖಾಂತರ ವಿಶೇಷ ಪಿಂಚಣಿ ಯೋಜನ ರೂಪಿಸಲು ಒಪ್ಪಿಗೆ ಸೂಚಿಸಲಾಗಿತ್ತು . ಇದಕ್ಕೆ ಸಂಬಂಧಿಸಿ ನೌಕರರ ವಯಸ್ಸಿನ ಆಧಾರ ಸಂಗ್ರಹಣೆ ಈಗಾಗಲೇ ಎಲ್ಲಾ ಜಿಲ್ಲೆಗಳಿಂದ ಸಂಗ್ರಹಿಸಿದೆ . ಕಳೆದ ಫೆಬ್ರವರಿ 8 , 2018 ರಂದು ರಾಜ್ಯಮಟ್ಟದ – ಶರಾತ್ರಿ ಬೆಂಗಳೂರಿನಲ್ಲಿ ನಡೆದಾಗ ಪಿಂರ್ಚನೆಗೆ ಸಂಬಂಧಿಸಿದ ಬೇಡಿಕೆಯ ಬಗ್ಗೆ ಮಾತನಾಡಿದ್ದು ಸಿರಾಟದ ಸ್ಥಳಕ್ಕೆ ಆಗಮಿಸಿದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಮಾಶಂಕರ್ ರವರು ಸಹ ಮೌಲಿಕವಾಗಿ ಒಪ್ಪಿಗೆ ಸೂಚಿಸಿರುತ್ತಾರೆ .
ಮಾತ್ರವಲ್ಲದೇ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಈ ಸರ್ಕಾರದ ಇಲಾಖಾ ಸಚಿವರಾದ ಮಾನ್ಯ ಶ್ರೀ ಸುರೇಶ್‌ ಕುಮಾರ್‌ರವರನು 19 / 09 / 19 ರಂದು ಭೇಟಿಯಾಗಿ ನಮ್ಮ ಬೇಡಿಕೆಗಳ ಮನವಿ ನೀಡಿ ಮೌಖಿಕವಾಗಿ ಸಹ ಚರ್ಚೆ ನಡೆಸಲಾಗಿದೆ . ಈ ವಿಚಾರ ಮಾತನಾಡಲು ಸೆಪ್ಟೆಂಬರ್ 29 ರ ನಂತರ ಮಾತುಕತೆಗೆ ದಿನಾಂಕ ನಿಗದಿಗೊಳಿಸಲಾಗುವುದು ಎಂದು ಒಪ್ಪಿಕೊಂಡಿರುತ್ತಾರೆ . ಎಲ್ಲವೂ ಅಂತಿಮವಾಗುವ ಹಂತದಲ್ಲಿರುವಾಗ ಶಿಕ್ಷಣ ಇಲಾಖೆಯಿಂದ 19 / 9 / 2019 ರಂದು ಪ್ರಧಾನ ಮಂತ್ರ ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆಗೆ ಶಾಲಾ ಬಿಸಿಯೂಟ ನೌಕರರನ್ನು ಒಳಪಡಿಸುವೆ ಆದೇಶ ಹೊರಡಿಸಿದೆ . ಈ ಆದೇಶವು ನಮಗೆ ದೊಡ್ಡ ಆಘಾತವನ್ನು ಉಂಟುಮಾಡಿದೆ . ಈ ಯೋಜನೆಯು ತಾತ್ಕಾಲಿಕವಾಗಿರುತ್ತದೆ , ಮತ್ತು 40 ವರ್ಷ ವಯಸ್ಸುನವರಿಗೆ ಮಾತ್ರ , ಮತ್ತು ಈ ಯೋಜನೆ ಜನಸಾಮಾನ್ಯರಿಗೆ ಮಾತ್ರ . ಆದರೆ ನಾವು ಒತ್ತಾಯಿಸುತ್ತಿರುವುದು ಶಿಕ್ಷಣ ಇಲಾಖೆಯ ಅಡಿಯಲ್ಲಿ ದುಡಿಯುತ್ತಿರುವ 1 . 18 ಸಾವಿರ ಸಿಬ್ಬಂದಿಗೆ ವಿಶೇಷವಾದ ಪಿಂಚಣಿ ಸೌಲಭ್ಯ ಬೇಕೆಂಬುದು ಸಂಘಟನೆಯ ಬೇಡಿಕೆ ಮತ್ತು 19 / 9 / 2019 ಸುತ್ತೋಲೆಯಲ್ಲಿ ಸಂಘಟನೆ ಬೇಡಿಕೆ ಎಂಬುದಾಗಿ ಸರ್ಕಾರ ಸುಳ್ಳು ಹೇಳಿರುವುದು ನಾಚಿಕೆಗೇಡಿನ ವಿಷಯ , ಈ ನೌಕರರಿಗೆ ಯಾವುದೇ ರೀತಿಯ ಪ್ರಯೋಜನವಾಗದ ಈ ಆದೇಶವನ್ನು ನಮ್ಮ ಸಂಘಟನೆಯು ಬಲವಾಗಿ ವಿರೋಧಿಸುತ್ತಿದೆ . ಇಲಾಖೆಯು ಈ ಆದೇ ರದ್ದು ಪಡಿಸಿ ಈ ಹಿಂದೆ ಮಾತುಕತೆ ನಡೆಸಿದ ಪ್ರಕಾರ ಜಾರಿ ಮಾಡದಿದ್ದಲ್ಲಿ ಅಕ್ಟೋಬರ್ ( ಅ ) ರಂದು ಜಿಲ್ಲಾಮಟ್ಟದಲ್ಲಿ ಹೋರಾಟಕ್ಕೆ ಕಲೆಸಿಡಲಾಗಿದೆ . ಹಾಗೂ ಡಿಸೆಂಬರ್ ಮೊದಲನೇ ವಾರ ರಾಜ್ಯಮಟ್ಟದ ಹೋರಾಟವು ಬೆಂಗಳೂರಿನಲ್ಲಿ ಬೃಹತ್‌ ಆಗಿ ನಡೆಸಲಾಗುವುದು ಎಂದು ಈ ಮೂಲಕ ತಿಳಿಯ ಪಡಿಸುತ್ತೇನೆ  ಎಂದು ಪತ್ರಿಕಾಗೋಷ್ಠಿಯಲ್ಲಿ  ಆಗ್ರಹಿಸ ಲಾಯಿತು.

 ಲಕ್ಷ್ಮೀದೇವಿ ಸೋನಾರ  ರಾಜ್ಯ ಅಧ್ಯಕ್ಷರು  ಶಿವನಗೌಡ ಮಾಲಿಪಾಟೀಲ್, ಅನ್ನಪೂರ್ಣ ಲಿಂಗದಾಳ,  ಖಾಸಿಂ ಸರ್ದಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Please follow and like us:
error
error: Content is protected !!