ಬಿಡಾಡಿ ದನಗಳ ನಿಯಂತ್ರಣಕ್ಕೆ ಕೊಪ್ಪಳ ನಗರಸಭೆ ಸೂಚನೆ

ಕೊಪ್ಪಳ ಅ. ಕೊಪ್ಪಳ ನಗರದಲ್ಲಿ ದನ ಕರುಗಳು ಹೆಚ್ಚಿನ ಪ್ರಮಾಣದಲ್ಲಿ ರಸ್ತೆಯ ಮಧ್ಯದಲ್ಲ್ಲಿಯೇ ಮಲಗುತ್ತಿದು ವಾಹನ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಂಗಿದ್ದು, ಸಂಬಂಧಪಟ್ಟ ದನಗಳ ಮಾಲಿಕರು ತಮ್ಮ ಜಾನುವಾರುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಕೊಪ್ಪಳ ನಗರಸಭೆ ಸೂಚನೆ

ನೀಡಿದೆ.
ನಗರದಲ್ಲಿ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಮಧ್ಯದಲ್ಲಿ ಬಿಡಾಡಿ ದನಗಳು ಮಲಗುವುದರಿಂದ ವಾಹಾನ ಸಂಚಾರಕ್ಕೆ ತೊಂದರೆ ಉಂಟಾಗಿದ್ದು, ಇದರಿಂದ ರಸ್ತೆ ಅಪಘಾತಗಳು ಕೂಡಾ ಸಂಭವಿಸುತ್ತವೆ. ಬಿಡಾಡಿ ದನಗಳು ತರಕಾರಿ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ತಿನ್ನಲು ನೂಕ-ನುಗ್ಗಲಿನಲ್ಲಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ಮಾರಾಟಗಾರರಿಗೆ ತುಂಬಾ ತೊಂದರೆ ಉಂಟಾಗಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಕಿರಿದಾದ ರಸ್ತೆಗಳಲ್ಲಿ ದನಗಳು ಗುದ್ದಾಡುತ್ತಾ ಓಡಿ ಬರುವುದರಿಂದ ಸಣ್ಣ ಪುಟ್ಟ ಮಕ್ಕಳಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಅಪಘಾತ ಉಂಟಾಗುತ್ತಿದೆ. ರಸ್ತೆ ಮಧ್ಯದಲ್ಲಿ ಬಿಡಾಡಿ ದನಗಳು ಗುಂಪು ಗುಂಪಾಗಿ ನಿಲ್ಲುವುದರಿಂದ ಟ್ರಾಫಿಕ್ ಜಾಮ್ ಆಗಿ ಅಪಘಾತ ಉಂಟಾಗುತ್ತಿದೆ. ಮತ್ತು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ.
ಸಂಬಂಧಪಟ್ಟ ದನಗಳ ಮಾಲಿಕರುಗಳು 7 ದಿನಗಳೊಳಗಾಗಿ ತಮ್ಮ ತಮ್ಮ ದನಕರುಗಳನ್ನು ತಮ್ಮ ಮನೆಯಲ್ಲಿ ಕಟ್ಟಿಹಾಕಿಕೊಂಡು ಸಾಕಬೇಕು. ಇಲ್ಲವೇ ದನಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ತಪ್ಪಿದಲ್ಲಿ ಬಿಡಾಡಿ ದನಗಳನ್ನು ಕೊಪ್ಪಳ ನಗರಸಭೆ ವಶಕ್ಕೆ ಪಡೆದುಕೊಂಡು ಗೋಶಾಲೆಗೆ ಹಸ್ತಾಂತರಗೊಳಿಸಲಾಗುವುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ.

Related posts