ಬಿಡಾಡಿ ಜಾನುವಾರುಗಳ ನಿಯಂತ್ರಣಕ್ಕೆ ಕೊಪ್ಪಳ ನಗರಸಭೆಯ ಸೂಚನೆ

ಕೊಪ್ಪಳ ಸೆ. 21  : ಕೊಪ್ಪಳ ನಗರದಲ್ಲಿ ಎಲ್ಲೆಂದರಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ನಿಯಂತ್ರಣಕ್ಕೆ ಕೊಪ್ಪಳ ನಗರಸಭೆ ಪೌರಾಯುಕ್ತರು ಸಂಬಂಧಿಸಿದ ಜಾನುವಾರುಗಳ ಮಾಲೀಕರು ತಮ್ಮ ಮನೆಯಲ್ಲಿ ಜಾನುವಾರುಗಳನ್ನು ಕಟ್ಟಿ ಹಾಕಿಕೊಳ್ಳಬೇಕು.  ತಪ್ಪಿದಲ್ಲಿ ಕರ್ನಾಟಕ ಪುರಸಭೆ ಕಾಯ್ದೆ 1964 ರ ಕಲಂ 239 ರನ್ವಯ ಅಪರಾಧವಾಗುತ್ತದೆ ಎಂದು ಸೂಚನೆ ನೀಡಿದ್ದಾರೆ.
ನಗರದಲ್ಲಿ ಬಿಡಾಡಿ ದನಗಳ ಹಾವಳಿ ದಿನೇ ದಿನೇ ಹೆಚ್ಚಾಗಿದ್ದು, ಸಾರ್ವಜನಿಕರಿಗೆ, ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ.  ಬಿಡಾಡಿ ದನಗಳು, ರಸ್ತೆ ಮಧ್ಯದಲ್ಲಿ ಮಲಗುತ್ತಿರುವುದರಿಂದ ಅಪಘಾತಗಳಾಗಿ ಸಾರ್ವಜನಿಕರಿಗೆ ಸಾವು ನೋವುಗಳು ಆಗುತ್ತಿದ್ದು, ಸಾರ್ವಜನಿಕರ ಸಂಚಾರಕ್ಕೆ ಆಡತಡೆ ಮಾಡುತ್ತಿರುವುದರಿಂದ ವಾಹನ ಸವಾರರಿಗೆ ಹಾಗೂ ಸಂಚರಿಸುವ ನಾಗರಿಕರಿಗೆ ಮತ್ತು ಸಂಚಾರಿ ಆರಕ್ಷಕ ಸಿಬ್ಬಂದಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿರುವುದು ನಗರಸಭೆ ಗಮನಕ್ಕೆ ಬಂದಿರುತ್ತದೆ. ಕಾರಣ ಸಾರ್ವಜನಿಕರ ಪ್ರಾಣದ ಹಿತದೃಷ್ಠಿಯಿಂದ ಹಾಗೂ ಸಂಚಾರ ಸುಗಮವಾಗಿ ನಡೆಯುವ ಹಿತದೃಷ್ಠಿಯಿಂದ ನಗರದ ಸಾರ್ವಜನಿಕರು ತಮ್ಮ ತಮ್ಮ ಸಾಕು ಜಾನುವಾರಗಳಾದ ಆಕಳು, ಹೋರಿಗಳು ವಗೈರೆ ಸಾಕು ಜಾನುವಾರುಗಳನ್ನು ತಮ್ಮ ತಮ್ಮ ಕೊಟ್ಟಿಗೆಯಲ್ಲಿ ಕೂಡಿ ಹಾಕಿಕೊಂಡು ಸಾಕುವುದು.  ಈ ರೀತಿ ಸಾಕು ಜಾನುವಾರುಗಳನ್ನು ಇನ್ನು ಮುಂದೆ ರಸ್ತೆಗಳಲ್ಲಿ ಅಲೆದಾಡಲು ಬಿಟ್ಟಲ್ಲಿ ಅಂತಹ ಜಾನುವಾರುಗಳನ್ನು ಬಿಡಾಡಿ ಜಾನುವಾರುಗಳೆಂದು ಪರಿಗಣಿಸಿ ನಗರಸಭೆ ವಶಕ್ಕೆ ಪಡೆದುಕೊಂಡು ಸಾಕಷ್ಟು ಪ್ರಮಾಣದ ಆಹಾರ ಮತ್ತು ನೀರಿನ ವ್ಯವಸ್ಥೆ ಇರುವ ಸ್ಥಳವಾದ ಗೋಶಾಲೆಗೆ ನಗರಸಭೆಯಿಂದ ಸೆ. 25  ರಂದು ಮಧ್ಯರಾತ್ರಿಯಿಂದ ಸ್ಥಳಾಂತರಿಸಲಾಗುವುದು. ಬಿಡಾಡಿ ಸಾಕು ಜಾನುವಾರುಗಳ ಮೇಲೆ ಯಾವುದೇ ಸಾಕು ಜಾನುವಾರುಗಳ ಮಾಲೀಕತ್ವದ ಹಕ್ಕು ಇರುವುದಿಲ್ಲ. ಆದ್ದರಿಂದ ಸಾರ್ವಜನಿಕರು ತಮ್ಮ ತಮ್ಮ ಸಾಕು ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಸಾಕಿಕೊಂಡು ಸಾರ್ವಜನಿಕರ ಪ್ರಾಣಕ್ಕೆ ಹಾಗೂ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ನಗರಸಭೆ ಪೌರಾಯುಕ್ತರು  ತಿಳಿಸಿದ್ದಾರೆ.

Please follow and like us:
error

Related posts