ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ

ಕೊಪ್ಪಳ..

ಹಮಾಲರ ಕಾಲೋನಿಯಲ್ಲಿ ಗಲಾಟೆ. ಕಾಂಗ್ರೆಸ್, ಬಿಜೆಪಿ ಹಾಗು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ. ವಾರ್ಡ್ ನಂ ೩ ರಲ್ಲಿ ಗಲಾಟೆ . ಬೂತ್ ನಂ ೫ , ೪, ೬ ಮತದಾನ ವೇಳೆ ಗಲಾಟೆ

ಕಾಂಗ್ರೆಸ್ ಪಕ್ಷ ಅಭ್ಯರ್ಥಿ ವಿಸಿಟಿಂಗ್ ಕಾರ್ಡ್ ನೀಡಿ ಮತ ಹಾಕಲು ಪ್ರೇರಣೆ ಮತದಾರಿಗೆ ಆಮಿಷ ನೀಡಿ
ಮತ ಹಾಕಲು ಒತ್ತಾಯ ಆರೋಪ. ೩ ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಅಮ್ಜದ್ ಪಟೇಲ್ ವಿಸಿಟಿಂಗ್ ಕಾರ್ಡ್ ನೀಡಿ ಆಮಿಷ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಂದ ಗಲಾಟೆ ನಿಯಂತ್ರಣಕ್ಕೆ. ಕಾರ್ಯಕರ್ತರನ್ನು ಚದುರಿಸಿದ ಪೊಲೀಸರು .ಅಹಿತಕರ ಘಟನೆ ನಡೆಯದಂತೆ ಬೀಗಿ ಪೊಲೀಸ್ ಬಂದೋಬಸ್ತ್.

ಗಂಗಾವತಿಯಲ್ಲೂ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ

ಕೊಪ್ಪಳದ ಗಂಗಾವತಿಯ 35 ನೇ ವಾರ್ಡ್ ಪೋಲಿಸ್ ಕ್ವಾರ್ಟರ್ಸ್ ನ ಮುಂಭಾಗದಲ್ಲಿರುವ ಮತಗಟ್ಟೆ ಬಳಿ ಗಲಾಟೆ ನಡೆದಿದೆ.

ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಜನರಿಗೆ ತಾಕೀತು ಮಾಡುವ ವೇಳೆ ಗಲಾಟೆ ಶುರುವಾಗಿದೆ.ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ ಪರಿಸ್ಥಿತಿ ಕೈ‌ಮೀರುವ ಹಂತಕ್ಕೆ ತೆರಳುತ್ತಿದ್ದಂತೆ ಗುಂಪನ್ನು ಚದುರಿಸಿದ ಪೋಲಿಸರು