ಬಿಜೆಪಿ ಮಂಡಲದ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರ ಆಯ್ಕೆ : ಸುನೀಲ್ ಹೆಸರೂರ

ಕೊಪ್ಪಳ ನಗರ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ
ಕೊಪ್ಪಳ :ಭಾರತೀಯ ಜನತಾ ಪಾರ್ಟಿ, ಕೊಪ್ಪಳ ನಗರ ಘಟಕಕ್ಕೆ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ, ಸಂಸದ ಸಂಗಣ್ಣ ಕರಡಿ,ಅಮರೇಶ ಕರಡಿ  ಹಾಗೂ ಇತರ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆಯ ಬಲವರ್ಧನೆಗಾಗಿ, ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ನಗರ ಘಟಕ ಅಧ್ಯಕ್ಷ ಸುನೀಲ ಹೆಸರೂರು ತಿಳಿಸಿದ್ದಾರೆ.
ಉಪಾಧ್ಯಕ್ಷರನ್ನಾಗಿ ಮಹೇಶ ಹಾದಿಮನಿ , ಪಪ್ಪ ಪಲ್ಲೇದ, ಸುವರ್ಣ ನೀರಲಗಿ. ನಾಗರಾಜ ಚಿತ್ರಗಾರ, ಕೌಸರ್ ಕೋಲ್ಕಾರ್,  ಬಸವರಾಜ ಬನ್ನಿಕೊಪ್ಪ, ಪ್ರಧಾನ ಕಾರ್ಯದರ್ಶಿಗಳಾಗಿ ರಾಘವೇಂದ್ರ ನರಗುಂದ ಮತ್ತು  ರಮಶ ಕವಲೂರು. ಕಾರ್ಯದರ್ಶಿಗಳನ್ನಾಗಿ ಶರಣಯ ಹಿರೇಮಠ,  ಪ್ರಭು ಕಿಡದಾಳ, ಶಾಂತಮ್ಮ ಹಿರೇಮಠ,  ಭಾರತಿ ಬಿ ಗುಡ್ಡಾನೂರು,  ಕೀರ್ತಿ ಶಿವಾನಂದ , , ಪಾಟೀಲ್,  ಗವಿಸಿದ್ದಪ ಮಸ್ಕಿ  ಕೋಶಾಧ್ಯಕ್ಷರಾಗಿ ಚಂದ್ರಶೇಖರಗೌಡ ಎಫ್ ಪಾಟೀಲ್ ಮತ್ತು  ಮಾರುತಿ ಆಪ್ಟೆ  ಇವರನ್ನು ಮಾಧ್ಯಮ ಪ್ರಮುಖರನ್ನಾಗಿ ನೇಮಕ ಗೊಳಿಸಿದೆ.
ನಗರ ಮಂಡಲ ಬಿಜೆಪಿಗೆ ವಿವಿಧ ಮೋರ್ಚಾಗಳ ಅಧ್ಯಕ್ಷರುಗಳಾಗಿ
ಯುವ ಮೋರ್ಚಾ ಅಭಿನಂದನ ತುಂಬಾಳ, ಮಹಿಳಾ ಮೋರ್ಚಾ ನಾಗರತ್ನ ಪಾಟೀಲ್, ಓ.ಬಿ.ಸಿ ಮೋರ್ಚಾ ಅಮರೇಶ ಮಡಿವಾಳರ, ಎಸ್.ಸಿ ಮೋರ್ಚಾ ಗಂಗಪ್ಪ ಮೂಲಿಮನಿ,  ಎಸ್.ಟಿ ಮೋರ್ಚಾ ವಿಜಯೇಂದ್ರ ಬಿಸರಳ್ಳಿ, ಅಲ್ಪ ಸಂಖ್ಯಾತರ ಮೋರ್ಚಾ ಸದ್ದಾಂ ಖಾಜಿ, ಹಾಗೂ ರೈತ ಮೋರ್ಚಾ ಅಧ್ಯಕ್ಷರನ್ನಾಗಿ ಚನ್ನಬಸವ ಗಾಳಿ ಇವರನ್ನು ನೇಮಕ ಮಾಡಿದೆ ಎಂದು ನಗರ ಘಟಕ ಅಧ್ಯಕ್ಷ ಸುನೀಲ್ ಹೆಸರೂರ ತಿಳಿಸಿದ್ದಾರೆ.
Please follow and like us:
error