ಬಿಜೆಪಿ ಪಾದಯಾತ್ರೆ ಕೊಪ್ಪಳದಲ್ಲಿ ಸಮಾರೋಪ

ಕೃಷ್ಣ ಬಿ. ಸ್ಕೀಂ ಗೆ ವಿಳಂಬ ಖಂಡಿಸಿ ಹಾಗೂ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿದ್ದ 71 ಕಿ.ಮೀ. ಪಾದಯಾತ್ರೆ ಕೊಪ್ಪಳದಲ್ಲಿ ಸಮಾರೋಪಗೊಂಡಿತು. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಾಲಬಂಡಿ ಗ್ರಾಮದ ಬಳಿಯ ಕೃಷ್ಣ ಬಿ. ಸ್ಕೀಂ ಯೋಜನೆಯ ಶಂಕುಸ್ಥಾಪನಾ ಸ್ಥಳದಿಂದ ಜನೇವರಿ 17 ರಂದು ಆರಂಭಗೊಂಡಿದ್ದ ಈ ಪಾದಯಾತ್ರೆ ನಾಲ್ಕು ದಿನಗಳ ಕಾಲ ನಡೆದು ಸಮಾರೋಪಗೊಂಡಿತು. ಕಲಾಲಬಂಡಿ ಗ್ರಾಮದಿಂದ ಆರಂಭಗೊಂಡಿದ್ದ ಈ ಪಾದಯಾತ್ರೆ ಕುಷ್ಟಗಿ, ಬೇವೂರು, ಇರಕಲ್‍ಗಡಾ ಮಾರ್ಗವಾಗಿ ನಾಲ್ಕು ದಿನಗಳ ಪಾದಯಾತ್ರೆ ಸಮಾರೋಪವಾಯಿತು. ಜಿಲ್ಲಾಡಳಿತ ಭವನದ ಬಳಿ ನಡೆದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿಯ ಎಲ್ಲ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಕೃಷ್ಣ ಬಿ ಸ್ಕೀಂನ ಕೊಪ್ಪಳ ಏತ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಅಲ್ಲದೆ, ಯೋಜನೆಗಾಗಿ ಅಂದು 1110 ಕೋಟಿ ರುಪಾಯಿ ಬಿಡುಗಡೆ ಮಾಡಿದ್ದರು. ನಂತರ ಆಡಳಿತಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅನುದಾನ ನೀಡಿಲ್ಲ. ಅಲ್ಲದೆ ನೀರಾವರಿಗಾಗಿ ಗಮನ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Please follow and like us:
error