ಬಿಜೆಪಿ ಪಕ್ಷದ ಪ್ರಣಳಿಕೆ ರೈತರ ಪರ

Koppal ಬಿಜೆಪಿ ಪಕ್ಷದ ಪ್ರಣಾಳಿಕೆ ರೈತರ ಪರವಾಗಿದೆ, ಕೃಷಿ ಹಾಗೂ ನೀರಾವರಿ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಲಿದೆ. ಆಂತರಿ ಭದ್ರತೆಯನ್ನು ಬಲಪಡಿಸುವಂತಿದೆ. ಗ್ರಾಮೀಣ ವಿಕಾಸ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಅಂತ ಕೊಪ್ಪಳ‌ ಲೋಕಸಭೆ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಅಭಿಪ್ರಾಯ ವ್ಯಕ್ತ ಪಡಿಸಿದರು.
ನಗರದಲ್ಲಿ ಸುದ್ದಿ ಗೋಷ್ಠಿ ನಡೆಸಿ ಅವರು ಮಾತನಾಡಿದರು.
ಪ್ರಣಾಳಿಕೆಯ ಮಖ್ಯ ಉದ್ದೇಶ ಎಡಪಂಥೀಯ ಉಗ್ರವಾದವನ್ನು ಸಂಪೂರ್ಣ ನಿರ್ಮೂಲನೆ ಮಾಡುವುದು ಸಂವಿಧಾನ ವಿಧಿ ೩೭೦ ನ್ನು ರದ್ದು ಪಡಿಸಿ, ಭಯೋತ್ಪಾದನೆಯ ವಿರುದ್ಧ ರಾಜೀ ಇಲ್ದೆ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದು. ಗಡಿಭಾಗದಲ್ಲಿ ನುಸುಳುಕೋರರನ್ನು ತಡೆ ಹಿಡಿದು ದೇಶದ ಸುರಕ್ಷತೆ ಕಾಪಾಡುವುದು ಅಂತ ಹೇಳಿದರು. ಇನ್ನು ರಾಷ್ಟ್ರ ಮೊದಲು ಪಕ್ಷ ನಂತರ ಎನ್ನುವ ತಾವು ಇಲ್ಲಿ ಬಲಪಂಥೀಯ ಹಾಗೂ ಎಡಪಂಥೀಯ ಬಗ್ಗೆ ಎಷ್ಟು ಸರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕರಡಿ ಸಂಗಣ್ಣ, ಎಡಪಂಥೀಯರೇ ಒಪ್ಪುಕೊಳ್ಳುತ್ತಾರೆ, ನಕ್ಸಲ್ ನಂಥ ಉಗ್ರ ಚುಟುವಟಿಕೆಗಳನ್ನು ಮಾಡುತ್ತಾರೆ, ಅದರಿಂದ ಹೊರ ಬರುವುದಕ್ಕೆ ತಯಾರಿಲ್ಲ. ಹಾಗಾಗಿ ಅದನ್ನ ಸಂಪೂರ್ಣ ನಿರ್ಮೂಲನೆ ಮಾಡುವುದೇ ನಮ್ಮ ಗುರಿ ಅಂತ ವಾದ ಮಾಡಿದರು.ಈ ಹಿಂದೆ ಇರುವ ಭರವಸೆಗಳನ್ನು ಈಡೇರಿಸಿಲ್ಲ, ಮತ್ತೆ ಹಳೆಯದನ್ನೇ ಮುಂದುವರೆಸಿದ್ದಾರೆ ಎಂಬ ಮಾಧ್ಯ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಸಂಗಣ್ಣ ರೈತರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ, ವ್ಯಾಪರಸ್ಥರಿಗೆ ಪಿಂಚಣಿ ಭಾಗ್ಯ, ೬೦ ವರ್ಷ ದಾಟಿದ ರೈತರಿಗೆ ಪಂಚಿಣಿ, ಪ್ರತಿ ಕುಟುಂಬಗಳಿಗೆ ಮನೆ, ಕುಡಿಯುವ ನೀರು ವಿದ್ಯುತ್ ಸಂಪರ್ಕ ಸೌಲಭ್ಯ ಈ ಬಾರಿಯ ಪ್ರಣಾಳಿಕೆಯ ಪ್ರಮುಖ ಅಂಶಗಳು ಅಂತ ಹೇಳಿದರು. ಇನ್ನು

ರೈತರ ಇರುವ ಸಾಲನ್ನೇ ಮನ್ನಾ ಆಗಿಲ್ಲ, ಬ್ಯಾಂಕ್ ಗಳು ಸಾಲ ಕೊಡುವುದಕ್ಕೆ ಮುಂದಾಗುತ್ತವೆಯೇ? ರೈತರು ಮಾಡಿದ ಸಾಲ ಒಂದೇ ರೀತಿ ಇರುವುದಿಲ್ಲ. ಅದರಲ್ಲೂ ನಿಜವಾದ ರೈತರು ಸಾಲನೇ ತೆಗೆದುಕೊಳ್ಳುವುದಿಲ್ಲ. ಸಹಕಾರಬ್ಯಾಂಕ್ ಗಳಲ್ಲಿ ಶ್ರೀಮಂತ ರೈತರ ಸಾಲ ಇರುತ್ತದೆ ಅದನ್ನ ಯೋಚಿಸಿ ನಿಜವಾದ ರೈತರಿಗೆ ಸಾಲ ಕೊಡುವ ಉದ್ದೇಶ ಇದಾಗಿದೆ ಅಂತ ಸ್ಪಷ್ಟನೆ ನೀಡಿದರು. ಒಟ್ಟಾರೆ ಕಾರ್ಯಕರ್ತರು, ಮತದಾರರು ಚುನಾವಣೆಗಾಗಿ ಕಾಯುತ್ತಿದ್ದಾರೆ. ರಾಷ್ಟ್ರಕ್ಕೆ ಮೋದಿಯಂತಹ ನಾಯಕರು ಅಗತ್ಯವಿದೆ ಅಂತ ಹೇಳುತ್ತಿದ್ದಾರೆ. ಇದೇ ೧೨ ಕ್ಕೆ ಕೊಪ್ಪಳದ ಗಂಗಾವತಿಗೆ ಮೋದಿ ಬರಲಿದ್ದಾರೆ. ಸುಮಾರು ೧ ಲಕ್ಷ ಜನ ಸೇರಲಿದ್ದಾರೆ, ಗಂಗಾವತಿಯ ಕೃಷಿ ಸಂಶೋಧನಾ ಕೇಂದ್ರದ ಬಳಿ ೩೦ ಎಕರೆಯ ಸ್ಥಳದಲ್ಲಿ ಬೃಹತ್ ವೇದಿಕೆ ಸಜ್ಜಾಗುತ್ತಿದೆ. ಮತದಾರರಿಗೆ ಅಭ್ಯರ್ಥಿಗಿಂತ ಮೋದಿ ಗೆಲವು ಮುಖ್ಯ ಅಂತ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ‌.ಚಂದ್ರಶೇಖರ್, ಜಿಲ್ಲಾದ್ಯಕ್ಷ ವಿರೂಪಾಕ್ಷ ಪ್ಪ ಸಿಂಗನಾಳ, ಗಿರಿಗೌಡ, ಹಾಲೇಶ್ ಕಂದಾರಿ ಉಪಸ್ಥಿತರಿದ್ದರು.