ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಪರಶುರಾಮ್ ಹುಡೇಜಾಲಿ

ಬೆಂಗಳೂರು:  ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರ ಸಮ್ಮುಖದಲ್ಲಿ ಕೊಪ್ಪಳ ನಗರಸಭೆಯ ಸದಸ್ಯ ಪರುಶುರಾಮ್ ಹುಡೇಜಾಲಿ (ಮ್ಯಾದರ್ ) ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದ್ದು   ಪರಶುರಾಮ್ ಹುಡೇಜಾಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಸಚಿವರಾದ  ಸಿ.ಸಿ.ಪಾಟೀಲ್ , ಶಾಸಕರದ ಶಂಕರ್ ಪಾಟೀಲ್, ಹಾಸನ ಶಾಸಕರಾದ ಪ್ರೀತಮ್ ಗೌಡ , ವಿಧಾನ ಪರಿಷತ್ ಸದಸ್ಯರಾದ ತೇಜಸ್ವಿನಿ ರಮೇಶ್ , ಅಮರೇಶ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಮಹಾಂತೇಶ ಪಾಟೀಲ್ , ನವೀನ್ ಗುಳಗಣ್ಣನವರ್ ಉಪಸ್ಥಿತರಿದ್ದರು.

Please follow and like us:
error