ಬಿಜೆಪಿ ನಾಯಕರ ಬಂಧನ : ಪ್ರತಿಭಟನೆ

ತುಂಗಾಭದ್ರಾ ಎಡದಂಡೆ ಕಾಲುವೆಗೆ ನೀರು ಬಿಡುವಂತೆ ಬಿಜೆಪಿ ಒತ್ತಾಯ. ಭತ್ತ ಬೆಳೆಗಳಿಗೆ ನೀರಿಲ್ಲದೆ ಅನ್ನದಾತನ ಪರದಾಟ

ಸಿಎಂ ಸಿದ್ದರಾಮಯ್ಯಗೆ ಮನವಿ ಕೊಡಲು ಸಿದ್ದರಾಗಿದ್ದವರನ್ನ ಬಂಧಿಸಿದ ಪೊಲೀಸರು

ಸರ್ಕಾರದ ಧೋರಣೆ ಖಂಡಿಸಿ ಭುಗಿಲೆದ್ದ ಬಿಜೆಪಿ ಗರ ಪ್ರತಿಭಟನೆ

ನೂರಾರು ಕಮಲ ನಾಯಕರ ಬಂಧನ

ಇಂದು ಕೊಪ್ಪಳಕ್ಕೆ ಸಿಎಂ ಸಿದ್ದರಾಮಯ್ಯ ಬರ್ತಿದ್ದಾರೆ. ಕೊಪ್ಪಳ ಮತ್ತು ಯಲಬುರ್ಗಾದಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ತುಂಗಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರು ಬಿಡುವಂತೆ ಬಿಜೆಪಿ ಮನವಿ ಸಲ್ಲಿಸಲು ಮುಂದಾಗಿದ್ರು. ಸಿಎಂ ಕಾರ್ಯಕ್ರಮಕ್ಕೆ ಎಲ್ಲಿ ಬಿಜೆಪಿ ಕಾರ್ಯಕರ್ತರು ಅಡ್ಡಿ ಪಡಿಸ್ತಾರೆ ಅಂತ ಒಳಗಿಂದೊಳ ಸರ್ಕಾರ ಪೊಲೀಸರ ಮೂಲಕ ಬಿಜೆಪಿ ಮುಖಂಡರನ್ನ ಬಂಧಿಸಿದ್ದಾರೆ. ಬೆಳಿಗ್ಗೆ ಮನೆಯಲ್ಲಿ ಆಯಾಗಿ ಮಲಗಿದ್ದ ಬಿಜೆಪಿ ಮುಖಂಡರ ಮನೆ ಮನೆಗೆ ತೆರಳಿದ ಪೊಲೀಸರು ಕದ ತಟ್ಟಿ ಬಂಧಿಸಿದ್ದಾರೆ.

ಕೊಪ್ಪಳ ದ ಸಂಸದ ಸಂಗಣ್ಣ ಕರಡಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿಂಗನಾಳ‌ ವಿರೂಪಾಕ್ಷಪ್ಪ, ದೆಢೆಸೂಗೂರು ಬಸವರಾಜ್, ಮಾಜಿ ಶಾಸಕ, ಎಂಪಿ ಗಳನ್ನು ಬಿಡದೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಮತ್ತು ಸರ್ಕಾರ ವಿರುದ್ಧ ಆಕ್ರೋಶಗೊಂಡ ಕಮಲ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಕೊಪ್ಪಳದಲ್ಲಿಯು ಸಂಸದ ಸಂಗಣ್ಣ ಕರಡಿ ಮನೆ ಬಂದ ಪೊಲೀಸರ ಸಂಸದರನ್ನ ಬಂಧಿಸಲು ಮುಂದಾದಾಗ ಪೊಲೀಸರ ಮತ್ತು ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ ನಡರಸಿದ್ದಾರೆ. ಗಂಗಾವತಿಯ ಕೇಸರಟ್ಟಿ ಬಳಿ ಬಿಜೆಪಿ ಮುಖಂಡರನ್ನ ಕರೆದೋಯ್ಯತ್ತಿದ್ದ ಪೊಲೀಸ್ ಬಸ್ ತಡೆದು ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ರು.ಇತ್ತ ಗಂಗಾವತಿಯ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಿದ ಬಿಜೆಪಿ ಕಾರ್ಯಕರ್ತರು, ನಂತರ ಮೆರೆವಣೆ ಮಾಡುತ್ತ ನೀಲಕಂಠೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು. ಈ ವೇಳೆ ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರು ಮುಂದಾದ್ರು ಬಗ್ಗದಿದ್ದಾಗ ಬಲವಂತವಾಗಿ ನೂರಾರು ಕಾರ್ಯಕರ್ತರನ್ನ ಬಂಧಿಸಿದ್ದಾರೆ.

ತುಂಗಾಭದ್ರಾ ಜಲಾಶಯ ನೆಚ್ಚಿಕೊಂಡು ಭತ್ತ ನಾಟಿ ಮಾಡಿದ ಅನ್ನದಾತನ ಬದುಕು ಇಂದು ನೀರಿಲ್ಲದೆ ಅಯೊಮಯವಾಗಿದೆ. ಗಂಗಾವತಿ, ಕಾರಟಗಿ, ಸಿಂಧನೂರು, ರಾಯಚೂರು ಭಾಗದಲ್ಲಿ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದು ಎಡದಂಡೆ ಕಾಲುವೆಗೆ ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಪರವಾಗಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡು ರೈತರೊಂದಿಗೆ ಕಳೆದ ಐದಾರು ದಿನಗಳ ಹಿಂದೆ ಕಾಡಾ ಕಚೇರಿ ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ರು ಸರ್ಕಾರ ಮಾತ್ರ ರೈತರ ನಗ್ಗೆ ಕಿಂಚಿತ್ತು ಕರುಣೆ ತೋರಿರಲಿಲ್ಲ.ಇಂದು ಸಿಎಂ ಸಿದ್ದರಾಮಯ್ಯ ತವರಿಗೆ ಆಗಮಿಸುತ್ತಿದ್ದು ಬಿಜೆಪಿ ಪ್ಲಾನ್ ಮಾಡಿಕೊಂಡು ಸಿಎಂ ಗೆ ಮುತ್ತಿಗೆ ಹಾಕುತ್ತೆ ಅಂತ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಂಧಿಸಿದ್ದಾರೆ.

ಈಗಾಗಲೆ ಬರಗಾಲದಿಂದ ತತ್ತರಿಸುತ್ತಿರುವ ಜನ ರೈತರಿಗೆ ಸರ್ಕಾರ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಿ ಫಲದ ನಿರೀಕ್ಷೆಯಲ್ಲಿದ್ದ ಅನ್ನದಾತನಿಗೆ ಸರ್ಕಾರ ಮಾತ್ರ ಕಣ್ ತೆರೆಯುತ್ತಿಲ್ಲ. ಮುಂಜಾಗೃತ ಕ್ರಮದ ಹೆಸರಲ್ಲಿ ಪೋಲಿಸರು ಅತಿರೇಕವಾಗಿ ವರ್ತಿಸಿದರೆ ಎನ್ನುವುದು ಜನರ ಪ್ರಶ್ನೆಯಾಗಿದೆ..

Please follow and like us:
error

Related posts