ಬಿಜೆಪಿ ನಾಯಕರು  ಕೋಮಾ ಸ್ಥಿತಿಗೆ ಹೋಗಿದ್ದಾರೆ- ಶಿವರಾಜ್ ತಂಗಡಗಿ

ಗಂಗಾವತಿ : ಇಬ್ಬರು ಮಾಜಿ ಸಂಸದರು ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೇಸ್ ಪಕ್ಷಕ್ಕೆ ಬಂದಿದ್ದರಿಂದ ಇದೀಗ ಬಿಜೆಪಿ ಪಕ್ಷದ ನಾಯಕರು ಕೋಮಾ ಸ್ಥಿತಿಗೆ ಹೋಗಿದ್ದಾರೆ ಎಂದು ಕಾಂಗ್ರೇಸ್ ಶಾಸಕ ಶಿವರಾಜ್ ತಂಗಡಗಿ ಹೇಳಿದ್ರು. ಕೊಪ್ಪಳದ ಗಂಗಾವತಿಯಲ್ಲಿ ಮಾತನಾಡಿದ ಶಾಸಕ ಶಿವರಾಜ್ ತಂಗಡಗಿ, ಕೊಪ್ಪಳ ಹಾಗೂ ರಾಯಚೂರು ಭಾಗದ ಹಿರಿಯ ನಾಯಕರು, ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ, ಶಿವರಾಮಗೌಡ್ರು ಪಕ್ಷಕ್ಕೆ ಬಂದಿದ್ದು, ನನಗೆ ಹಾಗೂ ಇಕ್ಬಾಲ್ ಅನ್ಸಾರಿಯವರಿಗೆ ಆನೆಬಲ ಬಂದಂತಾಗಿದೆ. ಈ ಇಬ್ಬರೂ ನಾಯಕರಿಗೆ ಮಂದಿನ ದಿನಗಳಲ್ಲಿ ನಮ್ಮ ಪಕ್ಷ ಸೂಕ್ತ ಸ್ಥಾನಮಾನ ನೀಡಲಿದೆ ಎಂದ್ರು.

Related posts