You are here
Home > Koppal News > ಬಿಜೆಪಿ ಟಿಕೆಟ್‌ಗಾಗಿ ದಿರ್ಘದಂಡ ನಮಸ್ಕಾರ

ಬಿಜೆಪಿ ಟಿಕೆಟ್‌ಗಾಗಿ ದಿರ್ಘದಂಡ ನಮಸ್ಕಾರ

 ಕೊಪ್ಪಳ: ಮಾ.೩೦ ಸಿ.ವಿ ಚಂದ್ರಶೇಖರ ಅಭಿಮಾನಿಬಳಗದಿಂದ ಸಿ.ವಿ. ಚಂದ್ರಶೇಖರ ಟಿಕೇಟ್ ಸಿಗಲೇಂದು ದೀರ್ಘದಂಡ ನಮಸ್ಕಾರ ಹಾಕಲಾಯಿತು. ಅಭಿಮಾನಿಗಳಾದ ಜೋತಿಬಸು, ಮಾರುತಿ ಆಪ್ಟೆ, ಈರಣ್ಣ ರೆಡ್ಡಿ, ತಿಪ್ಪಣ್ಣ ಗುಗ್ಗೆಲೆ ಇವರು ನಗರದ ಶ್ರೀ ಬಸವೇಶ್ವರ ವೃತ್ತದಿಂದ ಗವಿಮಠದವರೆಗೆ ದಿರ್ಘದಂಡ ನಮಸ್ಕಾರಗಳನ್ನು ಹಾಕುವ ಮೂಲಕ ನೂರಾರು ಅಭಿಮಾನಿಗಳು ಶ್ರೀಗವಿಸಿದ್ದೆಶ್ವರನಲ್ಲಿ ಬಿಜೆಪಿ ರಾಷ್ಟಿಯ ಪರಿಷತ್ ಸದಸ್ಯರಾಗಿರುವ ಸಿ.ವಿ.ಚಂದ್ರಶೇಖರಗೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಗಲೆಂದು ವಿಶೇಷ ಪೂಜೆ ಪ್ರಾರ್ಥನೆ ಮಾಡುವ ಮೂಲಕ ಕೊಪ್ಪಳ ಕ್ಷೇತ್ರದ ಜನತೆ ಬದಲಾವಣೆಯನ್ನು ಬಯಸಿದ್ದು ಇಂದು ದೇಶದಲ್ಲಿ ಬಿಜೆಪಿ ಪಾರ್ಟಿಯಿಂದ ಹಾಗೂ ನರೇಂದ್ರಮೋದಿ ಅವರಿಂದ ಬದಲಾವಣೆಯಾಗಿದ್ದು ಜಗತ್ತೆ ಭಾರತವನ್ನ ಗೌರವಿಸುವಂತಾಗಿದೆ ಬದಲಾವಣೆ ಹಾಗೂ ಸದೃಡ ಸಮಾಜ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುವುದು ಮತದಾರರ ಅಭಿಪ್ರಾಯವಾಗಿದ್ದು ಈ ಬಾರಿ ಬಿಜೆಪಿಯಿಂದ ಸಿ ವಿ ಚಂದ್ರಶೇಖರವರಿಗೆ ಪಕ್ಷ ಟಿಕೆಟ್ ನೀಡಿದಲ್ಲಿ ಕ್ಷೇತ್ರದಲ್ಲಿ ಅಪಾರ ಅಭಿವೃದ್ದಿ ಕಾಣಬಹುದಾಗಿದೆ ಎಂದು ಸಿವಿಸಿ ಅಭಿಮಾನಿಗಳು ಮಾಧ್ಯಮದವರಿಗೆ ತಿಳಿಸಿದರು.

Top