ಬಿಜೆಪಿ ಚುನಾವಣಾ ಸಂಚಾಲಕರ ನೇಮಕ

ಕೊಪ್ಪಳ, ಜ.೧೩: ಮುಂಬರುವ ವಿಧಾನಸಭಾ ಚುಣಾವಣೆಯಲ್ಲಿ ಮಿಷನ್-೧೫೦ ಗುರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ಕೊಪ್ಪಳ ಜಿಲ್ಲೆಯ ಚುನಾವಣಾ ಸಂಚಾಲಕ ಮತ್ತು ವಿಧಾನಸಭಾ ಕ್ಷೇತ್ರ ಚುನಾವಣಾ ಸಂಚಾಲಕರನ್ನು ನೇಮಿಸಿದೆ.
ಕೊಪ್ಪಳ ಜಿಲ್ಲಾ ಚುನಾವಣಾ ಸಂಚಾಲಕರನ್ನಾಗಿ ಜಿಲ್ಲಾ ಉಪಾಧ್ಯಕ್ಷ ರಾಜು ಬಾಕಳೆ ವಕೀಲರು
ಕುಷ್ಟಗಿ ವಿಧಾನಸಭಾ ಕ್ಷೇತ್ರದ ಸಂಚಾಲಕರನ್ನಾಗಿ ಅಪ್ಪಣ್ಣ ಪದಕಿ
ಕನಕಗಿರಿ ವಿಧಾನಸಭಾ ಕ್ಷೇತ್ರದ ಸಂಚಾಲಕರನ್ನಾಗಿ ಹೆಚ್.ಗಿರೇಗೌಡ
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಸಂಚಾಲಕರನ್ನಾಗಿ ಚಂದ್ರಶೇಖರ ನಾಲತ್ವಾಡ
ಗಂಗಾವತಿ ವಿಧಾನಸಭಾ ಕ್ಷೇತ್ರದ ಸಂಚಾಲಕರನ್ನಾಗಿ ಉಮೇಶ ಸಜ್ಜನ
ಕೊಪ್ಪಳ ವಿಧಾನಸಭಾ ಕ್ಷೇತ್ರದ ಸಂಚಾಲಕರನ್ನಾಗಿ ನವೀನಕುಮಾರ ಗುಳಗಣ್ಣವರ
ಇವರುಗಳನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಸೂಚನೆಯ ಮೇರೆಗೆ ಜಿಲ್ಲಾ ಮತ್ತು ವಿಧಾಸಸಭಾ ಕ್ಷೇತ್ರದ ಚುನಾವಣಾ ಸಂಚಾಲಕರನ್ನಾಗಿ ರಾಜ್ಯ ಬಿಜೆಪಿ ಕಾರ್ಯಾಲಯದಿಂದ ನೇಮಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error