ಬಿಜೆಪಿ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ಕೊಪ್ಪಳ, ಅ.೧೩: ಸಾವಿರಾರು ವರ್ಷಗಳಿಂದ ಕವಿಗಳು ಚಿಂತಕರು, ದಾರ್ಶನಿಕರು, ಜನಸಾಮಾನ್ಯರ ಅತ್ಯಂತ ಗೌರವಕ್ಕೆ ಪಾತ್ರವಾದ ಕಾವ್ಯ ರಾಮಾಯಣ ಇಂತಹ ಅಮೂಲ್ಯ ಕೊಡುಗೆ ನೀಡಿದ ಶ್ರೀ ಮಹರ್ಷಿ ವಾಲ್ಮೀಕಿ ಗುರುಗಳಿಗೆ ಅನಂತ ಕೋಟಿ ನಮನಗಳು ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ ಚಂದ್ರಶೇಖರ ಹೇಳಿದರು.
ಅವರು ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂದಿನ ಪೀಳಿಗೆಗೂ ವಾಲ್ಮೀಕಿಯ ರಾಮಾಯಣದಲ್ಲಿರುವ ಸಂದೇಶವೂ ಪ್ರಸ್ತುತವಾಗಿದೆ ಎಂದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಹಾಲೇಶ ಕಂದಾರಿ, ಸುನೀಲ ಹೆಸರೂರ, ಮಹೇಶ ಹಾದಿಮನಿ, ಶರಣಯ್ಯಸ್ವಾಮಿ, ಹೇಮಲತಾ ನಾಯಕ, ವಾಣಿಶ್ರೀ ಮಠದ, ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ಅನೇಕರು ಉಪಸ್ಥಿತರಿದ್ದರು.

Please follow and like us:
error