ಬಿಜೆಪಿ ಅಭ್ಯರ್ಥಿ ಬಿಟ್ಟು ಉಳಿದವರೆಲ್ಲಾ ನನ್ನ ಜೊತೆಗಿದ್ದಾರೆ- ಇಕ್ಬಾಲ್ ಅನ್ಸಾರಿ

ಎಲ್ಲಾ ಪಕ್ಷಗಳಲ್ಲೂ ಮಿತ್ರರಿದ್ದಾರೆ. ಬಿಜೆಪಿ ಅಭ್ಯರ್ಥಿ ಹೊರತುಪಡಿಸಿ ಉಳಿದವರೆಲ್ಲಾ ನನ್ನ ಜೊತೆಗಿದ್ದಾರೆ ಹೊಸ ಬಾಂಬ್ ಸಿಡಿಸಿದ ಅನ್ಸಾರಿ

ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ಏನೇ ತಂತ್ರ ಮಾಡಿದ್ರೂ ಅದು ನನ್ನ ಮುಂದೆ ಜಿರೋ ಬಿಜೆಪಿ ಅಭ್ಯರ್ಥಿ ಬಿಟ್ಟು ಬೇರೆಯವರೇಲ್ಲರೂ ನನ್ನ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಶಾಸಕ, ಗಂಗಾವತಿಯ ಕಾಂಗ್ರೇಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಹೊಸ ಬಾಂಬ್ ಹಾಕಿದ್ದಾರೆ. ಕೊಪ್ಫಳದ ಗಂಗಾವತಿಯ ಅವರ ನಿವಾಸಿದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ಹಿಂದೂ ಟ್ರಂಪ್ ಕಾರ್ಡ್ ಬಳಸಿ ರಾಜಕೀಯ ಮಾಡ್ತಾ ಇದ್ದಾರೆ. ಆದ್ರೆ ಈ ರೀತಿ ಟ್ರಂಪ್ ಕಾರ್ಡ್ ಬಳಸುತ್ತಿರೋ ಬಿಜೆಪಿ ಹಾಗೂ ಸಂಘಪರಿವಾರದವರು ನಿಜವಾದ ಹಿಂದೂಗಳಲ್ಲ. ಅವರಿಗೆ ಹಿಂದೂ ಧರ್ಮದ ಸಂಸ್ಕೃತಿ ಆಚಾರ,ವಿಚಾರ ಗೊತ್ತಿಲ್ಲ ಎಂದ್ರು ಬಿಜೆಪಿ ವಿರುದ್ದ ಗುಡುಗಿದ್ರು. ಇನ್ನು ಗಂಗಾವತಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲು ಬಿಜೆಪಿ ಪ್ರಾಯೋಜಿಕತ್ವದಲ್ಲಿ ಜೆಡಿಎಸ್ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಅವರಿಗೆ ಮುಳುವಾಗಲಿದ ಎಂದ್ರು. ಇನ್ನು ಈಗಾಗಲೇ ಅತೃಪ್ತರಾಗಿದ್ದ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪರವರನ್ನು ಸಂಪರ್ಕಮಾಡಿದ್ಧೇನೆ ಅವರು ನನ್ನ ಪರವಾಗಿ ಪ್ರಚಾರಕ್ಕೆ ಬರಲಿದ್ದಾರೆ. ನಾನೊಬ್ಬ ಜಾತ್ಯಾತೀತ ವ್ಯಕ್ತಿಯಾಗಿದ್ದು, ಈ ಬಾರಿ ಗೆಲುವು ನನ್ನದೆ ಎಂದ್ರು.

Please follow and like us:
error