ಬಿಜೆಪಿಯ ನಾಸಿರುದ್ದಿನ್ ಹೇಳಿಕೆಗೆ ಮಹೆಮೂದ್ ತಿರುಗೇಟು

ಕೊಪ್ಪಳ ೦೧: ರೈತರ ಸಾಲ ಮನ್ನಾ ಮಾಡಲು ಒತ್ತಾಯಿಸಿ ಬಂದ್‌ಗೆ ಕರೆ ನೀಡಿದ ಬಿಜೆಪಿ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದ ಸಂಧರ್ಬದಲ್ಲಿ ರೈತರ ಹಸಿರು ಶಾಲು ಹಾಕಿಕೊಂಡು ಸಂಸದ ಸಂಗಣ್ಣ ಕರಡಿ ಪೊಲೀಸರೊಂದಿಗೆ ವರ್ತಿಸಿರುವದಲ್ಲದೆ ಪೊಲೀಸ್ ಠಾಣೆಗೆ ನುಗ್ಗಿ ಧಾಂದಲೆಗೆ ಯತ್ನಿಸಿರುವುದು ಸರಿಯಲ್ಲ ಇದು ರೈತರಿಗೆ ಮಾಡಿದ ಅಪಮಾನ ಎಂದು ಜೆಡಿಎಸ್ ರಾಜ್ಯ ಯುವ ಸಂಘಟನಾ ಕಾರ್ಯದರ್ಶಿ ಸೈಯದ ಮಹೇಮೂದ್ ಹುಸೈನಿ ಸಂಸದ ಸಂಗಣ್ಣ ಕರಡಿಯವರ ಕ್ರಮವನ್ನು ಖಂಡಿಸಿದ್ದಾರೆ.
ಸಂಸದರ ಬಗ್ಗೆ ಹೇಳಿಕೆ ನೀಡಿದ್ದೇನೆ ಎಂಬ ಕಾರಣಕ್ಕಾಗಿ ಅವರ ಬೆಂಬಲಿಗ ಬಿಜೆಪಿ ಅಲ್ಪ ಸಂಖ್ಯಾತ ಮುಖಂಡ ಸೈಯದ್ ನಾಸಿರುದ್ದೀನ್ ಹುಸೈನಿಯವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪವನ್ನು ಹೊರಿಸಲು ಹೊರಟಿದ್ದಾರೆ ನಾಸಿರುದ್ದೀನ್‌ರವರು ನನ್ನ ಮೇಲೆ ನಿರಾಧಾರ ಆರೋಪ ಮಾಡುವ ಮುನ್ನ ತಾವು ಏನು ಎಂಬುವುದನ್ನು ಅರಿತುಕೊಳ್ಳಲಿ ನನಗೆ ಬುದ್ಧಿ ಹೇಳುವ ನೈತಿಕತೆ ಅವರಿಗಿಲ್ಲ ಅನಾವಶಕವಾಗಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿದರೆ ಸುಮ್ಮನಿರುವದಿಲ್ಲ ಎಂದು ಎಚ್ಚರಿಸಿದ ಅವರು ನಿಮ್ಮ ಬಗ್ಗೆ ಸಾಕಷ್ಟು ಪ್ರಕರಣಗಳ ಮಾಹಿತಿ ನನ್ನ ಬಳಿ ಇದೆ ಎಂದು ಹೇಳಿದರು.
ನನಗೆ ಬುದ್ಧಿವಾದ ಹೇಳುವದಾಗಲಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸುವದಾಗಲಿ ಮಾಡುದಕ್ಕಿಂತ ಮುಂಚೆ ತಾನು ಏನು ಎಂಬುವದನ್ನು ಮೊದಲು ಅರಿತುಕೊಳ್ಳಲಿ ಇಲ್ಲವಾದಲ್ಲಿ ತಮ್ಮ ನಿಜವಾದ ಬಣ್ಣ ನಾನು ಬಯಲು ಮಾಡುವ ಅವಕಾಶ ಮಾಡಿಕೊಡಬೇಡಿ ಎಂದು ಸೈಯದ್ ನಾಸಿರುದ್ದೀನ್ ಹುಸೈನಿಯವರ ಹೇಳಿಕೆಗೆ ಜೆಡಿಎಸ್ ರಾಜ್ಯ ಯುವ ಸಂಘಟನಾ ಕಾರ್ಯದರ್ಶಿ ಸೈಯದ ಮಹೇಮೂದ್ ಹುಸೈನಿ ತಿರುಗೇಟು ನೀಡಿದ್ದಾರೆ.