ಬಿಜೆಪಿಯ ಕುದುರೆ ವ್ಯಾಪಾರ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

Koppal News ಬಿಜೆಪಿಯ ಕುದುರೆ ವ್ಯಾಪಾರ ವಿರೋಧಿಸಿ ಯುವ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ. ಕೊಪ್ಪಳದ ಅಶೋಕ ಸರ್ಕಲ್ ನಲ್ಲಿ ಪ್ರತಿಭಟನಿಗಿಳಿದ ಕಾಂಗ್ರೆಸ್ ಕಾರ್ಯಕರ್ತರು. ಆಪರೇಷನ್ ಕಮಲದ ಹೆಸರಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಸೆಳೆಯುತ್ತಿರುವ ಸಮ್ಮಿಶ್ರ ಸರಕಾರವನ್ನು ಬೀಳಿಸಲು ತಂತ್ರ ರೂಪಿಸಿರುವ ಬಿಜೆಪಿಯ ನಡೆಯನ್ನು ತೀವ್ರವಾಗಿ ಖಂಡಿಸಿದರು.

ಕೇಂದ್ರ ಸರಕಾರ, ನರೇಂದ್ರ ಮೋದಿ ಹಾಗೂ ಬಿಜೆಪಿಯ ವಿರುದ್ದ ಘೋಷಣೆ ಕೂಗಿದ ಕಾರ್ಯಕರ್ತರು ಕುದುರೆ ವ್ಯಾಪಾರದ ಮೂಲಕ ಪ್ರಜಾಪ್ರಭುತ್ವವನ್ನಯ ಕಗ್ಗೊಲೆ ಮಾಡುತ್ತಿದೆ. ಭ್ರಷ್ಟಾಚಾರ ಎಸಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಪರೇಷನ್ ಕಮಲವನ್ನು ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅದ್ಯಕ್ಷ ಶರಣ ಬಸವರಾಜ್ ರೆಡ್ಡಿ, ಶರಣಗೌಡ ನಾಯಕ, ಮೊಹ್ಮದ್ ಅಸೀಪ್, ಮೊಹ್ಮದ್ ರಫಿ ಧಾರವಾರ, ರವಿ ಕುರಗೋಡ, ಪ್ರಕಾಶ ರೆಡ್ಡಿ ಬಸರಿಗೀಡದ, ಮಂಜುನಾಥ ಗೊಂಡಬಾಳ, ಸಲಿಂ ಅಳವಂಡಿ ಸೇರಿದಂತೆ ಇತರರು ಭಾಗೀಯಾಗಿದ್ದರು.

Please follow and like us:
error