You are here
Home > Koppal News > ಬಿಜೆಪಿಯವರು ಚೆಕ್ ಮೂಲಕ ಲಂಚ ತೆಗೆದುಕೊಂಡು ಜೈಲಿಗೆ ಹೋಗಿದ್ದರು- ಸಿದ್ದರಾಮಯ್ಯ

ಬಿಜೆಪಿಯವರು ಚೆಕ್ ಮೂಲಕ ಲಂಚ ತೆಗೆದುಕೊಂಡು ಜೈಲಿಗೆ ಹೋಗಿದ್ದರು- ಸಿದ್ದರಾಮಯ್ಯ

ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿಯವರು ಲಂಚದ ಚೆಕ್ ತೆಗೆದುಕೊಂಡು ಹೋದಂತೆ ಇಂದಿರಾಗಾಂಧಿ ಅವರು ಜೈಲಿಗ

ಹೋಗಲಿಲ್ಲ. ಇಂದಿರಾಗಾಂಧಿ ಅವರು ತುರ್ತು ಪರಸ್ಥಿತಿ ಹಿನ್ನೆಲೆಯಲ್ಲಿ ಜೈಲಿಗೆ ಹೋಗಿದ್ದರು ಎಂದು ಸಿಎಂ ಸಿದ್ದರಾಮಯ್ಯ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಟಾಂಗ್ ಕೊಟ್ಟಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದಿರಾಗಾಂಧಿ ಅವರು ತುರ್ತು ಪರಸ್ಥಿತಿ ಹಿನ್ನೆಲೆಯಲ್ಲಿ ಜೈಲಿಗೆ ಹೋಗಿದ್ದರು. ಆದರೆ, ಯಡಿಯೂರಪ್ಪ ಸೇೀರಿದಂತೆ ಬಿಜೆಪಿ ಅನೇಕ ಮುಖಂಡರು ಲಂಚದ ಹಣ, ಚೆಕ್ ಪಡೆದುಕೊಂಡು ಜೈಲಿಗೆ ಹೋಗಿ ಬಂದಿದ್ದಾರೆ. ಈಗಾಗಲೇ ಯಡಿಯೂರಪ್ಪ ಮೇಲೆ 42 ಪ್ರಕರಣಗಳು ಇವೆ. ಮೊದಲು ಅವುಗಳಿಂದ ಹೊರಬರಲಿ ಎಂದರು. ಅಧಿವೇಶನದ ಸಂದರ್ಭದಲ್ಲಿ ಅದನ್ನು ಬಿಡ್ತಿನಿ, ಇದನ್ನು ಬಿಡ್ತಿನಿ ಎಂದು ಯಡಿಯೂರಪ್ಪ ಹೇಳಿದ್ದರು. ಅವರು ಏನು ಬಿಡಲಿಲ್ಲ. ಹಾವು ಬಿಡುವ ಮಾತನಾಡಿದ ಯಡಿಯೂರಪ್ಪನ ಬುಟ್ಟಿಯಲ್ಲಿ ಹಾವೇ ಇಲ್ಲ ಎಂದು ವ್ಯಂಗ್ಯವಾಡಿದರು. ಇನ್ನು ಹೊನ್ನಾವರದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪರೇಶ್ ಮೇಸ್ತಿ ಕುಟುಂಬಸ್ಥರು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯ ಮಾಡಿದ್ದರು. ಅದರಂತೆ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಿದೆ. ಬಿಜೆಪಿಯವರು ಈ ಹಿಂದೆ ಸಿಬಿಐಗೆ ಪ್ರಕರಣವನ್ನು ವಹಿಸಿಲ್ಲ. ಆದರೆ, ಕೇಂದ್ರದಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎನ್ನುತ್ತಾರೆ ಎಂದು ದೂರಿದರು. ಕೋಮು ಗಲಭೆ ಸೃಷ್ಠಿಸುವುದೇ ಬಿಜೆಪಿಯವರ ಕೆಲಸ. ರಾಜಕೀಯ ಲಾಭಕ್ಕಾಗಿ ಅವರು ಈ ರೀತಿ ಮಾಡುತ್ತಾರೆ. ವೋಟಿನ ಧೃವೀಕರಣಕ್ಕಾಗ ಬಿಜೆಪಿ ಈ ರೀತಿ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಬಲವಾಗಿ ಆರೋಪಿಸಿದರು. ಇನ್ನು ನಾವು ಯಾವುದೇ ಧರ್ಮವನ್ನು ಒಡೆಯುವ ಕೆಲಸ ಮಾಡಿಲ್ಲ. ವೀರಶೈವರು, ಲಿಂಗಾಯತರು ಬೇರೆ ಬೇರೆ ಪಿಟಿಷನ್ ಕೊಟ್ಟಿದ್ದಾರೆ. ಅದನ್ನು ಮೈನಾರಿಟಿ ಕಮಿಷನ್‍ಗೆ ಕಳಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಹೇಳಿದರು.
—————————

Top