ಕೊಪ್ಪಳ : ಬಿಜೆಪಿಯವರು ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಲ್ಲಿ ಒಂದೂ ಈಡೇರಿಸಿಲ್ಲ. ಜನ-ಧನ್ ಹಣ ಹಾಕ್ತಿನಿ ಅಂದಿದ್ರು. ಹಾಕಿಲ್ಲ ರೈತರಿಗೆ ಬೆಳೆ ಹಾನಿ ಪರಿಹಾರ ಇನ್ನೂ ಕೊಟ್ಟಿಲ್ಲ ಎಂದು ಬಿಜೆಪಿ ವಿರುದ್ದ ಶಾಸಕ ರಾಘವೇಂದ್ರ ಹಿಟ್ನಾಳ ವಾಗ್ದಾಳಿ ನಡೆಸಿದರು. ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ಪಕ್ಷದಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದರು.

ನವೆಂಬರ್-ಡಿಸೆಂಬರ್ನಲ್ಲಿ ಕರೋನಾ ಭಾರತದಲ್ಲಿ ಶೇಕಡಾ 50 ರಷ್ಟು ಆಗುತ್ತೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಮುನ್ನೆಚ್ಚರಿಕೆ ನೀಡಿದೆ. ಆದರೂ ಕೆಲ ಮಾಧ್ಯಮಗಳಲ್ಲಿ ಮೋದಿ ಕೊರೊನಾ ನಿಯಂತ್ರಿಸಿದ್ದಾರೆ ಎನ್ನುತ್ತಿವೆ. ವಾಸ್ತವವಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಎರಡೂ ವಿಫಲವಾಗಿವೆ. ಅದರಲ್ಲೂ ಡಿಸೇಲ್-ಪೆಟ್ರೋಲ್ ಬೆಲೆ ದಿನೇ ದಿನೇ ಹೆಚ್ಚುತ್ತಾ ಇದೆ.ಬೆಲೆ ಏರಿಕೆ ವಿರೋಧಿಸಿ ಅಧಿಕಾರಕ್ಕೆ ಬಂದವರು ನೀವು ಈಗ ಯಾಕೆ ಬೆಲೆ ಹೆಚ್ಚಿಸ್ತಾ ಇದ್ದೀರಿ? .ಮುಂದಿನ ದಿನಗಳಲ್ಲಿ ದೇಶದ ಜನ ನಿಮಗೆ ತಕ್ಕ ಪಾಠ ಕಲಿಸ್ತಾರೆ.ಕೊರೊನಾದ ಈ ದಿನಗಳಲ್ಲಿ ಕಾಂಗ್ರೆಸ್ ನ ಪ್ರತಿ ಮುಖಂಡರು ಬಡವರಿಗೆ ನೆರವಾಗಿರುವುದು ಶ್ಲಾಘನೀಯ. ಈ ಧರಣಿ ಮೂಲಕ ದೇಶದ ಜನರಿಗೆ ದೊಡ್ಡ ಸಂದೇಶ ಕಳಿಸುತ್ತಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಿಸಿಸಿ ಅದ್ಯಕ್ಷ ಶಿವರಾಜ್ ತಂಗಡಗಿ, ಉಸ್ತುವಾರಿ ಚಂದ್ರಶೇಖರ್ ಭಟ್, ಮಹಿಳಾ ಘಟಕದ ಅದ್ಯಕ್ಷೆ ಮಾಲತಿ ನಾಯಕ್, ಸುರೇಶ್ ಬೂಮರಡ್ಡಿ, ಅಮ್ಜದ್ ಪಟೇಲ್, ಪಹೀಮ್ ಬಾಷಾ, ಕಾಟನ್ ಪಾಷಾ, ರಾಜಶೇಖರ ಹಿಟ್ನಾಳ, ಜುಲ್ಲು ಖಾದ್ರಿ, ಎಲ್ಲ ತಾಲೂಕುಗಳ ಬ್ಲಾಕ್ ಅದ್ಯಕ್ಷರು ಉಪಸ್ಥಿತರಿದ್ದರು.