ಬಿಜೆಪಿಯಲ್ಲಿ ಗೊಂದಲ ಇರುವುದು ಸತ್ಯ – ವಿನಯಕುಮಾರ ಮೇಲಿನಮನಿ

wp-image-1796704399jpg.jpgಕೊಪ್ಪಳ : ಬಿಜೆಪಿ ಪಕ್ಷದಲ್ಲಿ ಹಲವಾರು ವಿಷಯಗಳಿಗೆ ಸಂಬಂದಿಸಿದಂತೆ ಗೊಂದಲ ಇರುವುದು ಸತ್ಯ. ಆದರೆ ಪಕ್ಷದ ಹಿರಿಯ ನಾಯಕರು ಮುಂದಿನ ದಿನಗಳಲ್ಲಿ ಇದನ್ನು ಸರಿ ಮಾಡಲಿದ್ದಾರೆ ಎಂದು ಜಿ.ಪಂ.ಮಾಜಿ ಉಪಾಧ್ಯಕ್ಷ, ರಾಯಣ್ಣ ಯುವ ಬ್ರಿಗೇಡ್ ನ ರಾಜ್ಯ ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ ಹೇಳಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ತಿಂಗಳು 7,೮ ರಂದು ರಾಯಣ್ಣ ಬ್ರಿಗೇಡ್ ನ ರಾಜ್ಯಮಟ್ಟದ ಅಭ್ಯಾಸ ವರ್ಗ ಕಾರ್ಯಕ್ರಮ ನಡೆಯಲಿದೆ. ರಾಯಣ್ಣ ಬ್ರಿಗೇಡ್ ರಾಜಕೀಯೇತರ ಸಂಘಟನೆಯಾಗಿದ್ದು ಬಡವರ ಪರ ಹೋರಾಟಗಳಲ್ಲಿ ತೊಡಗಿಕೊಂಡಿದೆ. ಅವರ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ಹೇಳಿದರು.

ಜಿಲ್ಲಾ ಘಟಕದ ಅದ್ಯಕ್ಷ ಮಲ್ಲಣ್ಣ ಮಾತನಾಡಿ ಯಡಿಯೂರಪ್ಪ- ಈಶ್ವರಪ್ಪರದು ಅಣ್ಣತಮ್ಮಂದಿರ ಜಗಳವಿದ್ದಂತೆ ಇವತ್ತು ಭಿನ್ನಾಭಿಪ್ರಾಯ ಇದ್ದರೂ ನಾಳೆ ಒಂದಾಗುತ್ತಾರೆ. ಬಿಜೆಪಿಯ ಪದಾದಿಕಾರಿಯಾಗಿರುವ ನನಗೆ ಇದುವರೆಗೆ ಯಾವುದೇ ನೋಟಿಸ್ ಬಂದಿಲ್ಲ. ಪಕ್ಷದಿಂದ ನೋಟಿಸ್ ಬಂದರೂ ರಾಯಣ್ಣ ಬ್ರಿಗೇಡ್ ನ ಸಂಘಟನೆಯ ಕಾರ್ಯ ಮುಂದುವರೆಯಲಿದೆ ಎಂದು ಹೇಳಿದರು.

Leave a Reply