ಬಿಜೆಪಿಗೆ ಶಾಕ್ ನೀಡಿದ ಶಿವರಾಜ್ ತಂಗಡಗಿ

ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ, ಶಿವರಾಮಗೌಡ ಕಾಂಗ್ರೆಸ್ ಗೆ

ಬೆಂಗಳೂರು : ಬಿಜೆಪಿಯ ಪ್ರಭಲ ನಾಯಕರು, ಮಾಜಿ ಸಂಸದರು ಕಮಲಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಲಿದ್ದಾರೆ. ಕೊಪ್ಪಳದ ಮಾಜಿ ಸಂಸದರಾದ ಶಿವರಾಮೆಗೌಡ, ಕೆ.ವಿರುಪಾಕ್ಷಪ್ಪ ಇಂದು ಬೆಂಗಳೂರಿನ ಸಿಎಂ ನಿವಾಸಕ್ಕೆ ತೆರಳಿ ಹೂ ಗುಚ್ಚ ನೀಡಿ ಭೇಟಿಯಾಗಿದ್ದಾರೆ. ಕನಕಗಿರಿ ಶಾಸಕ ಶಿವರಾಜ್ ತಂಗಡಗಿ, ಸಿಂಧನೂರು ಶಾಸಕ‌ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಸಿದ್ದರಾಮಯ್ಯ ರನ್ನು ಭೇಟಿಯಾಗಿದ್ದಾರೆ. ಕುರುಬ ಸಮುದಾಯದ ಪ್ರಭಾವಿ ನಾಯಕ, ರಾಯಣ್ಣ ಬ್ರಿಗೇಡ್ ನ ಅಧ್ಯಕ್ಷರಾಗಿದ್ದ ಕೆ.ವಿರುಪಾಕ್ಷಪ್ಪ. ಸಿಂಧನೂರು ಕ್ಷೇತ್ರದಿಂದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದರು. ಟಿಕೇಟ್ ಸಿಗುತ್ತೆ ಎಂಬ ವಿಶ್ವಾಸದಲ್ಲಿದ್ರು, ಆದ್ರೆ ಹೈಕಮಾಂಡ್ ಕೆವಲ ವಿರುಪಾಕ್ಷಪ್ಪ ಬದಲಿಗೆ ಕೊಲ್ಲಾ ಶೇಷಗಿರಿ ರಾವ್ ಅವರಿಗೆ ಟಿಕೇಟ್ ನೀಡಿತ್ತು, ಇತ್ತ ಗಂಗಾವತಿ ಕ್ಷೇತ್ರದಿಂದ ಟಿಕೇಟ್ ಆಕಾಂಕ್ಷಿಯಾಗಿದ್ದ ಶಿವರಾಮೆಗೌಡ ಕೂಡ ಟಿಕೇಟ್ ವಂಚಿತರಾಗಿ ಅಸಮಧಾನಗೊಂಡಿದ್ರು, ಲಿಂಗಾಯತ ಪಂಚಮಸಾಲಿ ಸಮುದಾಯದ ಪ್ರಭಾವಿ ನಾಯಕ ಶಿವರಾಮೆಗೌಡ. ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡುರಾವ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಬಂದ ನಂತರ ಸಂಜೆ 4 ಗಂಟೆ ವೇಳೆಗೆ ಅಧಿಕೃತವಾಗಿ ಕಾಂಗ್ರೆಸ್ ಧ್ವಜ್ ಹಿಡಿಯಲಿದ್ದಾರೆ. ಇಬ್ಬರು ನಾಯಕರು ಕಾಂಗ್ರೆಸ್ ಸೇರುವುದರಿಂದ ಬಿಜೆಪಿ ಗೆ ದೊಡ್ಡ ಪೆಟ್ಟು ನೋಡಿದರೆ ಕಾಂಗ್ರೆಸ್ ಗೆ ಆನೆ ಬಲ ಬಂದಂತಾಗಿದೆ. ಕೆ. ವಿರುಪಾಕ್ಷಪ್ಪ ಹಾಗೂ ಶಿವರಾಮಗೌಡ ಸೇರ್ಪಡೆ ಯಿಂದ ಶಾಸಕ ಶಿವರಾಜ್ ತಂಗಡಗಿಗೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿದೆ. ಕನಕಗಿರಿ ಮತ್ತು ಗಂಗಾವತಿ ಭಾಗದಲ್ಲಿ ಕಾಂಗ್ರೆಸ್ ಗೆ ದೊಡ್ಡ ಬಲ ಬಂದಿದೆ ಎನ್ನಲಾಗಿದೆ. ಶಿವರಾಜ್ ತಂಗಡಗಿ ಚಾಣಾಕ್ಯ ತಂತ್ರಕ್ಕೆ ಕನಕಗಿರಿಯ ಬಿಜೆಪಿ ಅಭ್ಯರ್ಥಿ ಅತಂತ್ರರಾಗಿದ್ದಾರೆ ಎನ್ನಲಾಗುತ್ತಿದೆ..

Please follow and like us:
error