ಬಿಜಿಪಿ ಪಕ್ಷದ ಧ್ವಜಾರೋಹಣ

ಕೊಪ್ಪಳ, ಪೆ.೧೨: ಮೇರಾ ಪರಿವಾರ್-ಬಿಜೆಪಿ ಪರಿವಾರ್ ದೇಶವ್ಯಾಪಿ ಅಭಿಯಾನದ ಅಂಗವಾಗಿ ಮಂಗಳವಾರದಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರಗೌಡ ಜಿ ಪಾಟೀಲ್ ಹಲಗೇರಿ ಅವರು ಮನೆಯ ಮೇಲೆ ಪಕ್ಷದ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಹಲಗೇರಿ ಬೂತ್ ಪ್ರಭಾರಿ ಬಸವರಾಜ ಸಜ್ಜನ್, ಬಿ.ಎಲ್.ಎ೨ ಗವಿಸಿದಪ್ಪ ಗುಡ್ಲಾನೂರ, ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣದ ಸಂಚಾಲಕ ಶೇಖರ ಪಾಟೀಲ್, ಜಿಲ್ಲಾ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ರೇವಣಪ್ಪ ಗುಡ್ಲಾನೂರ, ಬೂತ್ ಸಮಿತಿ ಅಧ್ಯಕ್ಷರು ಹಾಗೂ ಶಕ್ತಿ ಕೇಂದ್ರದ ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನ ಸುಂದರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.