ಬಿಎಸ್ ವೈ ಕೊಪ್ಪಳದಿಂದ ಸ್ಪರ್ಧಿಸಲಿ- ಕರಡಿ ಸಂಗಣ್ಣ

ಕೊಪ್ಪಳ : ಕೊಪ್ಪಳ ಜಿಲ್ಲೆಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚುನಾವಣೆಗೆ ಸ್ಪರ್ಧಿಸಲಿ. ಕನಕಗಿರಿ ಮೀಸಲು ಕ್ಷೇತ್ರವಾಗಿರುವುದರಿಂದ ಅದನ್ನು ಹೊರತು ಪಡಿಸಿ ಜಿಲ್ಲೆಯ ಯಾವುದೇ ವಿಧಾನಸಭಾ ಕ್ಷೇತ್ರದಿಂದಾಗಲಿ ಸ್ಪರ್ದಿಸಲಿ ಎಂದು ಕೊಪ್ಪಳದಲ್ಲಿ ಸಂಸದ ಕರಡಿ ಸಂಗಣ್ಣ ಹೇಳಿದರು. ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಯಡಿಯೂರಪ್ಪನವರು ರಾಜ್ಯದ ನಾಯಕರು, ಮುಂದಿನ ಮುಖ್ಯಮಂತ್ರಿಗಳು ನಮ್ ಜಿಲ್ಲೆಯಿಂದ ಸ್ಪರ್ದಿಸಿದರೆ ನಮಗೆ ಹೆಮ್ಮೆ ಅವರು ಕೊಪ್ಪಳದಿಂದಲೇ ಸ್ಪರ್ದಿಸಲಿ ಎಂದು ಒತ್ತಾಯಿಸುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಚಂದ್ರು ಹಲಗೇರಿ ಉಪಸ್ಥಿತರಿದ್ದರು.

Please follow and like us:
error