ಬಿಎಸ್‍ವೈ ಭೇಟಿಗೆ ಪೂರ್ವ ಸಿದ್ಧತೆ | ಪರಿವರ್ತನಾ ಯಾತ್ರೆಗೆ ಜನ ಸಂಪರ್ಕ ಸಭೆ

ಜಿಲ್ಲೆಯ ರೈತರಿಗೆ ನೀರಾವರಿಯಲ್ಲಿ ಅನ್ಯಾಯ ಕೊಪ್ಪಳ: ಜಿಲ್ಲೆಯ ರೈತರಿಗೆ ನ್ಯಾಯಬದ್ಧವಾಗಿ ದಕ್ಕಬೇಕಿದ್ದ ನೀರನ್ನು ದೊರಕಿಸಲು ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ. ನೀರಾವರಿ ಯೋಜನೆಗಳನ್ನು ಮನಸ್ಸಿಗೆ ಬಂದಂತೆ ತಿರುಚಲಾಗಿದ್ದು, ಚಾಲ್ತಿಯಲ್ಲಿದ್ದ ಯೋಜನೆಗಳಿಗೂ ಅನುದಾನ ಬಿಡುಗಡೆ ಮಾಡದೇ ವಂಚಿಸಲಾಗಿದೆ ಎಂದು ಬಿಜೆಪಿ ಯುವನಾಯಕ ಅಮರೇಶ ಕರಡಿ ಆರೋಪಿಸಿದರು. ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕವಲೂರು ಹಾಗೂ ಅಳವಂಡಿ ಗ್ರಾಮಗಳಲ್ಲಿ ಶನಿವಾರ ನಡೆಸಿದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕೃಷ್ಣಾ ಬಿ ಸ್ಕೀಂ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕುಷ್ಟಗಿ ಪಟ್ಟಣದಲ್ಲಿ ಸೆ. 20ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ರೈತರು ಹಾಗೂ ಪಕ್ಷದ ಕಾರ್ಯಕರ್ತರೊಡನೆ ಸಭೆ ನಡೆಸಿ ಚರ್ಚಿಸಿ ಪ್ರತಿಭಟನೆಯ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದರು. ನೀರಾವರಿ ಯೋಜನೆಗಳ ಜಾರಿಗೆ ಮನಸ್ಸು ಮಾಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ರೈತರನ್ನು ಸಂಘಟಿಸುವುದು ನಮ್ಮ ಉದ್ದೇಶ ಎಂದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕವಲೂರು, ಸೆ. 20ರ ಸಭೆಯ ಮೂಲ ಆಶಯವನ್ನು ವಿವರಿಸಿದರು. ಜೊತೆಗೆ, ನವೆಂಬರ್ 1 ರಂದು ಬೆಂಗಳೂರಿನಲ್ಲಿ ನಡೆಯುವ ಪರಿವರ್ತನಾ ಯಾತ್ರೆ ಕುರಿತೂ ಚರ್ಚೆ ನಡೆಸಿದರು. ಬಿಜೆಪಿ ಮುಖಂಡರಾದ ಸಿ.ವಿ. ಚಂದ್ರಶೇಖರ, ಜಿಲ್ಲಾ ಉಪಾಧ್ಯಕ್ಷ ರಾಜು ಬಾಕಳೆ, ಎಪಿಎಮ್ ಸಿ ಸದಸ್ಯ ಬಸವರಾಜ ಈಶ್ವರಗೌಡ್ರ, ಮಂಜುನಾಥ ಹಂದ್ರಾಳ, ಮಹಾಂತೇಶ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಕವಲೂರು ಗ್ರಾಮದಲ್ಲಿ ನಡೆದ ಸಭೆಯಲ್ಲಿ ವಸಂತರಡ್ಡಿ, ವಿಶ್ವನಾಥಪ್ಪ, ಸೋಮಯ್ಯಮಠ, ಗವಿಸಿದ್ದಪ್ಪ ದ್ಯಾಂಪೂರ, ಪರಮೇಶ್ವರ, ಅಂದಪ್ಪ ತೋಟದ, ಸಂತೊಷ ಗಡ್ಡದ, ನಾರಾಯಣಪ್ಪ ಬಿಸರಳ್ಳಿ, ವಿರಯ್ಯ ಸಿಂದೋಗಿಮಠ, ರಾಚಯ್ಯ, ದೇವಪ್ಪ, ವಿರುಪಾಕ್ಷಪ್ಪ, ಮಾಂತೇಶ ಹಿರೇಮಠ, ನಾಗಪ್ಪ ಹಳ್ಳೆಪ್ಪನವರ ಸೇರಿದಂತೆ ಬಿಜೆಪಿ ವಿವಿದ ವಿಭಾಗದ ಮುಖ್ಯಸ್ಥರು, ಕಾರ್ಯಕರ್ತರ, ಪದಾಧಿಕಾರಿಗಳು ಉಪಸ್ಥಿತರಿದ್ದರು. ———–

Please follow and like us:
error