ಬಾಲ್ಯ ವಿವಾಹ ಪ್ರೋತ್ಸಾಹಿಸಿದ ಗ್ರಾ.ಪಂ. ಅಧ್ಯಕ್ಷನಿಗೆ ಜೈಲು ಶಿಕ್ಷೆ

ಕೊಪ್ಪಳ ಡಿ. ): ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ವಿವಾಹವಾದ ವರನಿಗೆ, ವಿವಾಹ ಮಾಡಿದ ಬಾಲಕಿಯ ಮತ್ತು ವರನ ಪೋಷಕರಿಗೆ ಹಾಗೂ ಬಾಲ್ಯವಿವಾಹಕ್ಕೆ ಪ್ರೋತ್ಸಾಹಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷನಿಗೆ “ಬಾಲ್ಯ ವಿವಾಹ ನಿಷೇಧ ಕಾಯ್ದೆ-2006” ರಡಿಯಲ್ಲಿ ಹಿರಿಯ ಸಿವ್ಹಿಲ್ ನ್ಯಾಯಾಲಯವು ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.
2013ರ ಜನವರಿ. 08 ರಂದು ಜಿಲ್ಲೆಯ (ಯಲಬುರ್ಗಾ ತಾಲ್ಲೂಕಿನ) ಕುಕನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮದುವೆಯನ್ನು ಮಾಡುತ್ತಿರುವ ಬಗ್ಗೆ ಯಲಬುರ್ಗಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎಸ್.ಟಿ. ಚಿತ್ತಾಳೆ, ಜಯಶ್ರೀ ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ಹರೀಶ ಜೋಗಿ, ಶಿವರಾಮ್, ಶ್ರೀಕಲ್ಲಪ್ಪ,  ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಕುಮಾರ, ಕೊಪ್ಪಳ ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿಗಳಾದ ಬಸಪ್ಪ ಹಾದಿಮನಿ, ಸೋಮಶೇಖರ ಸ್ಥಳಕ್ಕೆ ತೆರಳಿ, ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ತಿಳುವಳಿಕೆಯನ್ನು ನೀಡಿ, ಅಪ್ರಾಪ್ತ ವಯಸ್ಸಿನ ಮಗುವಿಗೆ ಮದುವೆಯನ್ನು ಮಾಡಬೇಡಿ ಎಂದು ತಿಳಿಸಿದಾಗೂ ಸಹ,  ಅಪ್ರಾಪ್ತ ವಯಸ್ಸಿನ ಬಾಲಕಿಯ ಮದುವೆಯನ್ನು ನೆರವೇರಿಸಿದ್ದರಿಂದಾಗಿ, ವರ, ವರನ ತಂದೆ, ಬಾಲಕಿಯ ತಾಯಿ, ಚಿಕ್ಕಪ್ಪ ಮತ್ತು ಚಿಕ್ಕಮ್ಮ ಹಾಗೂ ಬಾಲ್ಯ ವಿವಾಹಕ್ಕೆ ಪ್ರೋತ್ಸಾಹಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಕುಕನೂರು ಪೊಲೀಸ್ ಠಾಣೆಯಲ್ಲಿ  2013ರ ಜನವರಿ. 10 ರಂದು ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರ ಕಲಂ 9, 10, 11 ರಡಿಯಲ್ಲಿ ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ದೂರೈಸ್ವಾಮಿ ಪ್ರಕರಣವನ್ನು ದಾಖಲಿಸಿದ್ದರು.
ಈ ಪ್ರಕರಣದ ತನಿಖೆಯನ್ನು ನಡೆಸಿದ ಕುಕನೂರು ಪೊಲೀಸ್ ಠಾಣೆಯ ತನಿಖಾಧಿಕಾರಿ ಗುರುಬಸವರಾಜ ತನಿಖೆಯನ್ನು ನಡೆಸಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ.  ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ಶುಭಾರವರು 2019ರ ನವೆಂಬರ್. 27 ರಂದು ಆರೋಪಿತರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಆರೋಪಿತರ ವಿವರ ಮತ್ತು ಶಿಕ್ಷೆಯ ಪ್ರಮಾಣ;
ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾದ ವರನಿಗೆ ಕಲಂ 9, 10, 11 ರಡಿಯಲ್ಲಿ 2 ವರ್ಷಗಳ  ಕಠಿಣ ಜೈಲು ಶಿಕ್ಷೆ ಮತ್ತು ರೂ. 30,000 ದಂಡ ವಿಧಿಸಲಾಗಿದೆ.  ಅಪ್ರಾಪ್ತ ಬಾಲಕಿಯ ತಾಯಿಗೆ ಕಲಂ 10 ರಡಿಯಲ್ಲಿ 2 ವರ್ಷಗಳ  ಕಠಿಣ ಜೈಲು ಶಿಕ್ಷೆ ಮತ್ತು ರೂ. 10,000 ದಂಡ, ಬಾಲಕಿಯ ಚಿಕ್ಕಮ್ಮನಿಗೆ ಕಲಂ 10 ರಡಿಯಲ್ಲಿ 2 ವರ್ಷಗಳ  ಕಠಿಣ ಜೈಲು ಶಿಕ್ಷೆ ಮತ್ತು ರೂ. 10,000 ದಂಡ, ಬಾಲಕಿಯ ಚಿಕ್ಕಪ್ಪನಿಗೆ ಕಲಂ 10, 11 ರಡಿಯಲ್ಲಿ 2 ವರ್ಷಗಳ  ಕಠಿಣ ಜೈಲು ಶಿಕ್ಷೆ ಮತ್ತು ರೂ. 20,000 ದಂಡ, ಬಾಲ್ಯ ವಿವಾಹಕ್ಕೆ ಸಹಕರಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷನಿಗೆ ಕಲಂ 10, 11 ರಡಿಯಲ್ಲಿ 2 ವರ್ಷಗಳ  ಕಠಿಣ ಜೈಲು ಶಿಕ್ಷೆ ಮತ್ತು ರೂ. 50,000 ದಂಡ ವಿಧಿಸಲಾಗಿದೆ.
ಈ ಪ್ರಕರಣಕ್ಕೆ ಸಂಬAಧಿಸಿದAತೆ ಮಹಿಳಾ ಮತ್ತು ಮ್ಕಕಳ ಅಭಿವೃದ್ಧಿ ಇಲಾಖೆ, ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ, ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿಗಳು, ಕುಕನೂರು ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ಮತ್ತು ಸಿಬ್ಬಂದಿ ಪ್ರಕರಣದ ಕುರಿತು ಸಮರ್ಪಕವಾಗಿ ಕಾರ್ಯನಿರ್ವಹಿಸಿರುತ್ತಾರೆ ಹಾಗೂ ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ಅಬೀದುಲ್ಲಾ ಇಮಾಮಸಾಬ್ ಹಾದಿಮನಿರವರು ಸರ್ಮಪಕವಾಗಿ ವಾದಿಸಿದ್ದಾರೆ.
ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರಡಿಯಲ್ಲಿ ಆರೋಪಿತರಿಗೆ ಜೈಲುಶಿಕ್ಷೆ ಮತ್ತು ದಂಡವನ್ನು ವಿಧಿಸಿದತಂಹ ತೃತೀಯ ಪ್ರಕರಣ ಇದಾಗಿದೆ.  ಬಾಲಕಿಯನ್ನು ಮದುವೆಯಾದ  ವರನಿಗೆ 2 ವರ್ಷ ಕಠಿಣ ಕಾರಾವಾಸ ಮತ್ತು ರೂ. 30.000/- ದಂಡ, ಬಾಲ್ಯವಿವಾಹವನ್ನು ನೇರವೆರಿಸಿದ ಪಾಲಕರಿಗೆ 40,000 ಮತ್ತು ಬಾಲ್ಯವಿವಾಹಕ್ಕೆ ಸಹಕಾರ, ಪ್ರೋತ್ಸಾಹ ನೀಡಿದ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ವ್ಯಕ್ತಿಗೆ 2 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ರೂ. 50,000  ದಂಡವನ್ನು ವಿಧಿಸಿದ ಪ್ರಕರಣ ಇದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ   ತಿಳಿಸಿದ್ದಾರೆ.

Please follow and like us:
error