ಬಾಲ್ಯ ವಿವಾಹದಿಂದ ಬಾಲಕಿ ರಕ್ಷಣೆ : ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು

ಕೊಪ್ಪಳ ಏ. ): ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಬಾಲ್ಯ ವಿವಾಹಕ್ಕೆ ಒಳಪಡುತ್ತಿದ್ದ ಗಂಗಾವತಿ ತಾಲೂಕಿನ ನವಲಿ ಗ್ರಾಮದ ಬಾಲಕಿಯನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿದೆ.

ಗಂಗಾವತಿ ತಾಲೂಕಿನ ನವಲಿ ಗ್ರಾಮದ ಬಾಲಕಿಯೊಂದಿಗೆ ಕೊಪ್ಪಳ ತಾಲೂಕಿನ ಜಬ್ಬಲಗುಡ್ಡ ಗ್ರಾಮದ ಕನಕಪ್ಪ ತಂದೆ ಹನುಮಂತಪ್ಪ ಸುಣಗಾರ ಎಂಬ ವರನೊಂದಿಗೆ ಮದುವೆ ಮಾಡುವುದಾಗಿ ಮಾಹಿತಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜಕಾರ್ಯಕರ್ತೆ ಯಮನಮ್ಮ, ಲೀಗಲ್ ಕಂ,ಪ್ರೊÃಬೆಷನ್ ಅಧಿಕಾರಿ ಶಿವಲೀಲಾ ವನ್ನೂರು, ಅಂಗನವಾಡಿ ಮೇಲ್ವಿಚಾರಕಿ ಚಂದ್ರಕಲಾ ಹಾಗೂ ಕನಕಗಿರಿ ಪೋಲಿಸ್ ಠಾಣೆಯ ಸಿಬ್ಬಂದಿ ಗವಿಸಿದ್ದಯ್ಯ ಹಿರೇಮಠ ಇವರುಗಳೊಂದಿಗೆ ಗಂಗಾವತಿ ತಾಲೂಕಿನ ನವಲಿ ಗ್ರಾಮದ ಬಾಲಕಿಯ ಮನೆಗೆ ಭೇಟಿ ನೀಡಿದಾಗ ಮದುವೆ ನಿಶ್ಚಯಿಸಿರುವುದು ಖಚಿತ ಗೊಂಡಿರುವುದಿಂದ ಬಾಲಕಿಯ ಶಾಲಾ ದಾಖಲಾತಿಯನ್ನು ಪರಿಶೀಲಿಸಿದಾಗ ಶಾಲಾ ದಾಖಲಾತಿಯ ಪ್ರಕಾರ ಬಾಲಕಿಗೆ 16 ವರ್ಷ 09 ತಿಂಗಳು 29 ದಿನಗಳಿದ್ದು  ಇದ್ದು, ಈ ವಿವಾಹವು ಬಾಲ್ಯ ವಿವಾಹವೆಂದು ಕಂಡು ಬಂದಿದೆ.

ಆದ್ದರಿಂದ ಬಾಲಕಿಯ ಪೋಷಕರಿಗೆ ತಿಳುವಳಿಕೆ ನೀಡಿ ಬಾಲಕಿಯನ್ನು ವಶಕ್ಕೆ ಪಡೆದು ಮುಂದಿನ ಆರೈಕೆ ಮತ್ತು ಪೋಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದೆ. ಬಾಲ್ಯ ವಿವಾಹ ಮಾಡುವುದು, ವಿವಾಹದಲ್ಲಿ ಪಾಲ್ಗೊಳ್ಳುವುದು ಕೂಡ ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Please follow and like us:
error