ಬಾಲಕ ಕಾಣೆ : ಅಪಹರಣ ಶಂಕೆ

ಕೊಪ್ಪಳ ಡಿ. 22 ): ಕೊಪ್ಪಳದ ಸರ್ಕಾರಿ ಬಾಲಕರ ಬಾಲಮಂದಿರದ ಸ್ವಾಗತ ಘಟಕದಲ್ಲಿ ದಾಖಲಾದ ಬಾಲಕ ಜಾಕೀರಹುಸೇನ ತಂದೆ ಶರೀಫಸಾಬ, ವಯಸ್ಸು 16 ವರ್ಷ, ಎಂಬ ಬಾಲಕ ಫೆಬ್ರವರಿ. 05 ರಂದು ಕಾಣೆಯಾಗಿದ್ದು, ಅಪಹರಣಕ್ಕೊಳಗಾಗಿದ್ದಾನೆ ಎಂಬ ಶಂಕೆ ಇದೆ. ಈ ಬಾಲಕ ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸರ್ಕಾರಿ ಬಾಲಕರ ಬಾಲಮಂದಿರದ ಸ್ವಾಗತ ಘಟಕದಲ್ಲಿ ದಾಖಲಾದ ಬಾಲಕ ಜಾಕೀರಹುಸೇನ ತಂದೆ ಶರೀಫಸಾಬ ವಯಸ್ಸು, 16 ವರ್ಷ, ಸಾ. ಡಾಂಗಾ ಪಾರ್ಕ ಗಣೇಶ ದೇವಸ್ಥಾನದ ಹತ್ತಿರ ದಾವಣಗೇರಿ, ಈತನು ಫೆಬ್ರವರಿ. 05 ರಂದು ಬೆಳಿಗ್ಗೆ 09 ಗಂಟೆ ಸುಮಾರಿಗೆ ಭಾಗ್ಯನಗರದ ವಿಜಯ ನಗರ ಬಡಾವಣೆಯಲ್ಲಿರುವ ಸರ್ಕಾರಿ ಬಾಲಕರ ಬಾಲಮಂದಿರದಿಂದ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಇಲ್ಲಿಯರವರೆಗೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಕಾರಣ ಈ ಬಾಲಕನನ್ನು ಯಾರೋ ಅಪರಿಚಿತರು ಯಾವುದೋ ಉದ್ದೇಶಕ್ಕಾಗಿ ಅಪಹರಣ ಮಾಡಿಕೊಂಡು ಹೋಗಿರಬಹುದು ಅಂತಾ ಸಂಶಯ ಬಂದಿದ್ದು, ಬಾಲಕ ಜಾಕೀರಹುಸೇನ ಈತನನ್ನು ಪತ್ತೆ ಮಾಡಿ, ಅಪಹರಣ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಾಲಮಂದಿರದ ಅಧೀಕ್ಷಕರಾದ ರೋಹಿನಿ ಕೊಟಗಾರ ಅವರು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಪಹರಣಕ್ಕೊಳಗಾದ ಅಪ್ರಾಪ್ತ ಬಾಲಕನ ಚಹರೆ ವಿವರ ಇಂತಿದೆ. ಜಾಕೀರ ಹುಸೇನ ತಂದೆ ಶರೀಫಸಾಬ ವಯಸ್ಸು 16 ವರ್ಷ, ಎತ್ತರ 4 ಪೂಟ. 4 ಇಂಚು, ಸದೃಢ ಮೈಕಟ್ಟು, ಕೆಂಪುಬಣ್ಣ, ಕಪ್ಪು ಕೂದಲು ಹೊಂದಿದ್ದು, ಕನ್ನಡ ಮತ್ತು ಹಿಂದಿ ಭಾಷೆಯನ್ನು ಮಾತನಾಡುತ್ತಾನೆ. ಕಾಣೆಯಾದಾಗ ನೀಲಿ ಬಣ್ಣದ ಪ್ಯಾಂಟ್ ಕೆಂಪು ಬಣ್ಣದ ಟೀ ಶರ್ಟ ಧರಿಸಿದ್ದಾನೆ. ಈ ಬಾಲಕನ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ.ನಂ. 08539-230100 & 230222, ನಗರ ಪೊಲೀಸ ಠಾಣೆ ಪೊಲೀಸ ಇನ್ಸಪೆಕ್ಟರ್ ಮೊ.ಸಂ. 9480803745, ಪೊಲೀಸ ಸಬ್ ಇನ್ಸಪೆಕ್ಟರ್ ಮೊ.ಸಂ. 9449995353, ನಗರ ಪೊಲೀಸ ಠಾಣೆ ದೂರವಾಣಿ ಸಂಖ್ಯೆ. 08539-220333 ಇಲ್ಲಿಗೆ ಮಾಹಿತಿ ನೀಡುವಂತೆ

Please follow and like us:
error