ಬಾಲಕಾರ್ಮಿಕರ ಪುನರ್‍ವಸತಿಗಾಗಿ ವಿಶೇಷ ತರಬೇತಿ ಕೇಂದ್ರಗಳ ಸ್ಥಾಪನೆಗೆ ಪ್ರಸ್ತಾವನೆ ಆಹ್ವಾನ

: ಕೊಪ್ಪಳ ಜಿಲ್ಲಾ ಬಾಲಕಾರ್ಮಿಕರ ಯೋಜನೆ ವತಿಯಿಂದ ಬಾಲಕಾರ್ಮಿಕರ ಪುನರ್‍ವಸತಿಗಾಗಿ ವಿಶೇಷ ತರಬೇತಿ ಕೇಂದ್ರಗಳನ್ನು (ಎಸ್.ಟಿ.ಸಿ) ತೆರೆದು ನಡೆಸಲು ಸ್ವಯಂ ಸೇವಾ ಸಂಸ್ಥೆಗಳಿಂದ ಪ್ರಸ್ತಾವನೆಗಳಿಗೆ ಆಹ್ವಾನಿಸಲಾಗಿದೆ.
ರಾಷ್ಟ್ರೀಯ/ ರಾಜ್ಯ ಬಾಲಕಾರ್ಮಿಕ ಯೋಜನೆಗಳಡಿಯಲ್ಲಿ ಬಾಲಕಾರ್ಮಿಕರ ತರಬೇತಿ ಕೇಂದ್ರಗಳನ್ನು (ಎಸ್.ಟಿ.ಸಿ) ಸರ್ಕಾರೇತರ ಸೇವಾ ಸಂಸ್ಥೆಗಳಿಂದ ತೆರೆದು ನಡೆಸಲು ಪ್ರಸ್ತಾವನೆಗಳನ್ನು ಸಲ್ಲಿಸಲು ಆಹ್ವಾನಿಸಲಾಗಿದ್ದು, ಅರ್ಹ ಸ್ವಯಂ ಸೇವಾ ಸಂಸ್ಥೆಗಳು ನಿಗದಿತ ಅರ್ಜಿಯನ್ನು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಕಛೇರಿಯಲ್ಲಿ ಪಡೆದು ಮಾ. 19 ರೊಳಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಅಧ್ಯಕ್ಷರಾದ ಎಂ. ಕನಗವಲ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.