ಬಾಬಾಸಾಹೇಬರಿಗೆ ಅಪಮಾನ ಯುವಕನ ಬಂಧನ

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನಲ್ಲಿ ಡಾ.ಬಾಬಸೇಹಬ ಅಂಬೇಡ್ಕರ್ ಅವರನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅಪಮಾನಿಸಿ ಪೋಸ್ಟ್ ಮಾಡಿದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ

ನಾಗರಾಜ ಮರಾಠ ಎಂಬ ಯುವಕ ಅಂಬೇಡ್ಕರ್ ಅವರ ಬಗ್ಗೆ ಅವಾಚ್ಯ ಪದಗಳನ್ನು ಬಳಸಿ ವಾಟ್ಸಪ್ ಮತ್ತು ಫೇಸ್ ಬುಕ್ ಲ್ಲಿ ಹರಿಬಿಟ್ಟಿದ್ದಾನೆ. ಅಲ್ಲದೇ ಪಾಕಿಸ್ತಾನ ಜಿಂದಬಾದ್ ಎಂಬ ಪೋಸ್ಟ್ ಕೂಡ ಮಾಡಿದ್ದಾನೆ. ಇತನ ವಿರುದ್ಧ ಸ್ಥಳೀಯ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ದಲಿತ ಸಂಘದ ಮುಖಂಡ ನೀಲಕಂಠಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸ್‌ ರು ನಾಗರಾಜನನ್ನು ಬಂಧಿಸಿದ್ದು, ಸೈಬರ್ ಪೊಲೀಸ್ ಠಾಣೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ

ಅಲ್ಲದೇ ನಾಗರಾಜ ಮರಾಠ ಮನೆಗೆ ಯುವಕರ ಗುಂಪೊಂದು ನುಗ್ಗಿ ಹಲ್ಲೆ ನಡೆಸಿರುವ ಘಟನೆ ಕೂಡ ಜರುಗಿದ್ದು, ಕುಟುಂಬಸ್ಥರಿಗೆ ಗಾಯಗಳಾಗಿವೆ. ಈ ಕುರಿತು ಕೂಡ ಪೊಲೀಸ್ ರು ವಿಚಾರಣೆ ನಡೆಸಿದ್ದಾರೆ.
ಇಷ್ಟು ದಿನ ಧರ್ಮ ಅಂಧಕಾರದ ಮುಳುಗಿದ ವ್ಯಕ್ತಿಗಳು ಬಾಬಸಾಹೇಬ ಅಂಬೇಡ್ಕರ್ ಅವರ ಪುತ್ಥಳಿ ಅಥವಾ ಭಾವಚಿತ್ರಕ್ಕೆ ಒಂದಲ್ಲ ಒಂದು ರೀತಿ ಅಪಮಾನ ಮಾಡುತ್ತಿದ್ದರು. ತಂತ್ರಜ್ಞಾನ ಯುಗದಲ್ಲಿ ಸಾಮಾಜಿಕ ಜಾಲ ತಾಣ ಭರಾಟೆ ಹೆಚ್ಚಾಗಿರುವುದರಿಂದ ವಿಕೃತ ಮನಸ್ಸುಗಳು ಅಂಬೇಡ್ಕರ್ ಅವರನ್ನು ಫೇಸ್ ಬುಕ್ ಮತ್ತು ವಾಟ್ಸಪ್ ಗಳಲ್ಲಿ ಅವಹೇಳಕಾರಿ ಪೋಸ್ಟ್ ಮಾಡುವುದು ಹೆಚ್ಚಾಗುತ್ತಿದೆ ಎಂದು ದಲಿತ ಸಂಘಟನೆಗಳು ಆರೋಪಿಸಿವೆ.

Please follow and like us:
error