ಬಾಕಿ ಉಳಿದ ಪೌರಕಾರ್ಮಿಕರ ವೇತನ ಪಾವತಿ : ಪಿ. ಸುನೀಲ್ ಕುಮಾರ್ ಸೂಚನೆ

ಕೊಪ್ಪಳ ಸೆ. 28 : ಕೊಪ್ಪಳ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರ ವೇತನವು ಸುಮಾರು ಐದು ತಿಂಗಳಿನಿಂದ ಬಾಕಿ ಉಳಿದ್ದು, ಒಂದು ವಾರದೊಳಗೆ ಅನುದಾನವನ್ನು ಕಾಯ್ದಿರಿಸಿ ಅನುಮೋದನೆ ಪಡೆದು ಪೌರಕಾರ್ಮಿಕರಿಗೆ ವೇತನವನ್ನು ಪಾವತಿಸಿ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು ವರ್ಷಗಳಿಂದ ಗುತ್ತಿಗೆ/ ಹೊರಗುತ್ತಿಗೆ ಹಾಗೂ ಕನಿಷ್ಠ ವೇತನದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಈಗಾಗಲೇ ಸರ್ಕಾರದ ನಿರ್ದೇಶನದಂತೆ ಪೌರ ಕಾರ್ಮಿಕರ ವಿಶೇಷ ನೇಮಕಾತಿ ನಿಯಮಗಳ ರೀತ್ಯಾ ಪೌರಕಾರ್ಮಿಕರನ್ನು ನೇಮಕಾತಿ ಮಾಡಿ ಬಾಕಿ ಉಳಿದಂತೆ ಪೌರಕಾರ್ಮಿಕರಿಗೆ ನಗರ ಸ್ಥಳೀಯ ಸಂಸ್ಥೆಗಳಿಂದ ನೇರವಾಗಿ ವೇತನ ಪಾವತಿಸಲು ಆದೇಶಿಸಲಾಗಿದೆ. ಆದರೂ ಸಹ ಕೆಲವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮುನಿಸಿಪಲ್ ನಿಧಿ ಅನುದಾನದ ಕೊರತರಯಿಂದ ಕೆಲವು ತಿಂಗಳುಗಳಿಂದ ವೇತನ ಪಾವತಿ ಮಾಡದೇ ಇರುವುದು ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಎಸ್.ಎಫ್.ಸಿ ಮುಕ್ತ ನಿಧಿ ಅನುದಾನದಲ್ಲಿ ಖರ್ಚಾಗದೇ ಬಾಕಿ ಉಳಿದಿರುವ ಅನುದಾನವನ್ನು ಗುರುತಿಸಿ ಅದನ್ನು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಅನುದಾನವನ್ನು ಕಾಯ್ದಿರಿಸಲು ಹಾಗೂ ಪ್ರಸಕ್ತ ಸಾಲಿನ ಅನುದಾನದಲ್ಲಿ ಪೌರಕಾರ್ಮಿಕರಿಗೆ ನೇರವಾಗಿ ವೇತನ ಪಾವತಿಸುವ ಸಲುವಾಗಿ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಲಾಗಿದೆ.
ಅದರಂತೆ ನಗರಸಭೆ ಗಂಗಾವತಿಗೆ ಜಿಲ್ಲಾಧಿಕಾರಿಗಳಿಂದ ಪ್ರಸಕ್ತ ಸಾಲಿನ ಅನುದಾನದಲ್ಲಿ ನೇಮಕಗೊಳ್ಳದೇ ಇರುವ ಪೌರಕಾರ್ಮಿಕರ ವೇತನ ಪಾವತಿಸಲು ಸುಮಾರು 5 ತಿಂಗಳಿನಿಂದ ಬಾಕಿ ಉಳಿದ ವೇತನವನ್ನು ಪಾವತಿಸಲು ಕ್ರಮ ಜರುಗಿಸಲಾಗುತ್ತಿದೆ. ಅದರಂತೆ ಬಾಕಿ ಉಳಿದ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರ ವೇತನ ಪಾವತಿಸಲು ಒಂದು ವಾರದೊಳಗೆ ಅನುದಾನವನ್ನು ಕಾಯ್ದಿರಿಸಿ ಅನುಮೋದನೆ ಪಡೆದು ವೇತನ ಪಾವತಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Please follow and like us:
error