You are here
Home > Koppal News > ಬಹುಮಾನ ವಿತರಣೆ ಹಾಗೂ ಸನ್ಮಾನ :

ಬಹುಮಾನ ವಿತರಣೆ ಹಾಗೂ ಸನ್ಮಾನ :

Koppal News 71ನೇ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಆಕರ್ಷಕ ಪಥಸಂಚಲನದಲ್ಲಿ ನೀಡಿದ ಕಾಳಿದಾಸ ಪ್ರೌಢ ಶಾಲೆಯ ಭಾರತ ಸೇವಾದಳ ತಂಡವು ಪ್ರಥಮ, ಬಾಲಕಿಯರ ಪ್ರೌಢ ಶಾಲೆ ಭಾರತ ಸೇವಾದಳ ತಂಡವು ದ್ವಿತೀಯ ಹಾಗೂ ಸರ್ಕಾರಿ ಪ್ರೌಢ ಶಾಲೆ ಭಾರತ ಸೇವಾದಳ ತಂಡವು ತೃತೀಯ ಸ್ಥಾನವನ್ನು ಪಡೆದು, ಬಹುಮಾನವನ್ನು ಪಡೆದುಕೊಂಡಿದ್ದಾರೆ. ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗ್ಯನಗರದ ವಿದ್ಯಾವಿಕಾಸ ಪ್ರೌಢ ಶಾಲೆಯು ಪ್ರಥಮ, ಸಿಪಿಎಸ್ ಪ್ರೌಢ ಶಾಲೆ ದ್ವಿತೀಯ ಹಾಗೂ ವಿಜಯ ನಗರ ಪ್ರೌಢ ಶಾಲೆಯು ತೃತೀಯ ಬಹುಮಾನವನ್ನು ಪಡೆದಿದೆ. ಗಾಂಧಿ ಗ್ರಾಮ ಪುರಸ್ಕಾರ ಯೋಜನೆಯಯಡಿ ಅತ್ಯುತ್ತಮ ಸಾಧನೆ ಮಾಡಿರುವ ಗ್ರಾ.ಪಂ.ಗಳಾದ ಕೆಸರಟ್ಟಿ, ಆಗೋಲಿ, ಹಾಲವರ್ತಿ, ಗೊಂಡಬಾಳ ಮತ್ತು ಇಟಗಿ ಗ್ರಾಮ ಪಂಚಾಯತ್‍ಗಳ ಪಿ.ಡಿ.ಓ ಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು

Top