ಬಹುಕಮಾನು‌ ತಡೆಗೋಡೆ ಕಾಮಗಾರಿ ಅಕ್ರಮ : ನಾಲ್ವರು ಪಿಡಿಓಗಳ ಅಮಾನತು; ಕ್ರಿಮಿನಲ್ ಕೇಸ್ ದಾಖಲಿಸಲು ಇಓಗೆ ಸೂಚನೆ

ಕೊಪ್ಪಳ: 2018-19 ಹಾಗೂ 2019-20ನೇ ಸಾಲಿನಲ್ಲಿ  ನರೇಗಾ ಯೋಜನೆಯಡಿ ವಿವಿಧ ಗ್ರಾಮಗಳಲ್ಲಿ‌ ನಿರ್ಮಿಸಲಾದ‌ ಬಹುಕಮಾನು‌ ತಡೆಗೋಡೆ ಕಾಮಗಾರಿಯಲ್ಲಿ ಸರಕಾರದ ಕೋಟ್ಯಂತರ ರೂಪಾಯಿ ಹಣವನ್ನು‌ ದುರ್ಬಳಕೆ ಮಾಡಿಕೊಂಡ ಆರೋಪದಡಿ ಹಿರೇಗೊಣ್ಣಾಗರ ಗ್ರಾಪಂ‌ ಪಿಡಿಓ ಯಮನಪ್ಪ‌ ರಾಮತಾಳ, ಮುದೇನೂರು‌ ಗ್ರಾಪಂ ಪಿಡಿಓ ವೆಂಕಟೇಶ್ ಪವಾರ್, ಹಾಬಲಕಟ್ಟಿ‌ ಗ್ರಾಪಂ ಪಿಡಿಓ ಚಂದಪ್ಪ ಕವಡಿಕಾಯಿ ಹಾಗೂ ತಳವಗೇರಾ ಗ್ರಾಪಂ ಪಿಡಿಓ ಶಿವಪುತ್ರಪ್ಪ ಬರದೇಲಿ ಅವರನ್ನು ಅಮಾನತು ಮಾಡಲಾಗಿದೆ. ಜೊತೆಗೆ ಕುಷ್ಟಗಿ ತಾಪಂ ಇಓಗೆ ಪತ್ರ ಬರೆದಿರುವ ಕೊಪ್ಪಳ ಜಿಪಂ ಸಿಇಓ ರಘುನಂದನ್ ಮೂರ್ತಿಯವರು  ಬಹು‌ ಕಮಾನು ತಡೆಗೋಡೆ (ಚೆಕ್ ಡ್ಯಾಂ)  ಕಾಮಗಾರಿಯಲ್ಲಿ ಸರಕಾರದ ಸುಮಾರು. 1.51 ಕೋಟಿ ರೂಪಾಯಿ ದುರ್ಬಳಕೆ ಮಾಡಿಕೊಂಡಿದ್ದು ನಾಲ್ವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.

Please follow and like us:
error