ಬಸವ ಜಯಂತಿ ಸಮಾರಂಭ

ಕೊಪ್ಪಳ, ೦೬ : ದಿ. ೦೭-೦೫-೨೦೧೯, ಮಂಗಳವಾರದಂದು ಬಸವ ಜಯಂತ್ಯುತ್ಸವ ಸಮಿತಿ, ಕೊಪ್ಪಳ ಮತ್ತು ವಿವಿಧ ಬಸವಾನುಯಾಯಿ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬಸವ ಜಯಂತ್ಯುತ್ಸವದ ಆಚರಣೆ ನಡೆಯಲಿದೆ. ಮುಂಜಾನೆ ೯ ಗಂಟೆಗೆ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪುತ್ಥಳಿಗೆ ಪೂಜೆ ಮತ್ತು ಮಾಲಾರ್ಪಣೆ ನಡೆಯಲಿದೆ. ಸಂಜೆ ೪ ಗಂಟೆಗೆ ಬಸವೇಶ್ವರ ಭಾವಚಿತ್ರದ ಮೆರವಣೆಗೆಯನ್ನು ಕೋಟೆ ರಸ್ತೆಯ ಮಹೇಶ್ವರ ದೇವಸ್ಥಾನದಿಂದ ಗಡಿಯಾರ ಕಂಬ-ಜವಾಹರ ರಸ್ತೆ, ಆಜಾದ್ ಸರ್ಕಲ್, ಅಂಬೇಡ್ಕರ್ ವೃತ್ತದ ಮೂಲಕ ಗವಿಮಠದ ಆವರಣದವರೆಗೆ ನಡೆಯಲಿದೆ. ತದನಂತರ ಸಂಜೆ ೬ ಗಂಟೆಗೆ ಶ್ರೀ ಗವಿಮಠದ ಆವರಣದಲ್ಲಿ ಬಸವಗೋಷ್ಠಿ ನಡೆಯಲಿದೆ. ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಸಂಸ್ಥಾನ ಶ್ರೀಗವಿಮಠ, ಕೊಪ್ಪಳ ಶ್ರೀಗಳು ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿಕೊಳ್ಳಲಿದ್ದಾರೆ. ಅದೇ ರೀತಿ ಪೂಜ್ಯ ಈಶ್ವರ ಮಂಟೂರ, ಬಸವಜ್ಞಾನ ಗುರುಕುಲ, ಹುನ್ನೂರು-ಮಧುರಖಂಡಿ, ತಾ. ಜಮಖಂಡಿ ಇವರು ಸಹ ಸಾನಿಧ್ಯ ವಹಿಸಲಿದ್ದಾರೆ. ಶರಣ ಚಿಂತಕರು, ವೈದ್ಯರೂ ಆಗಿರುವ ಜಮಖಂಡಿಯ ಡಾ. ಗಂಗಾಶ್ರೀ ಅನಂತಪುರ ಇವರು ಬಸವ ಚಿಂತನೆ ಪ್ರಸ್ತುತ ಪಡಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕಾಯಕದ ಮೂಲಕ ಗಮನ ಸೆಳೆದ ಕಾಯಕ ಜೀವಿಗಳಿಗೆ ಮತ್ತು ಸಾಧಕರಿಗೆ ಬಸವ ಕಾರುಣ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಕಾರ್ಯಕ್ರಮದ ನಂತರ ಪ್ರಸಾದದ ವ್ಯವಸ್ಥೆಯಿರುತ್ತದೆ. ಎಲ್ಲ ಬಸವಾಭಿಮಾನಿಗಳು ಬಸವ ಜಯಂತಿಯ ಈ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ಕೊಪ್ಪಳ ಜಿಲ್ಲಾ ಬಸವ ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error