ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿಗೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ತಿರುಗೇಟು

ಕೊಪ್ಪಳ :  ಅವರು ಕೈಯಲ್ಲಿ ಖಡ್ಗ ಹಿಡಿಯುವ ಮಾತನಾಡುತ್ತಾರೆ ಬೇರೆಯವರೇನು ಬಳೆ ಹಾಕಿರುವುದಿಲ್ಲ ಎಂದು ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿಗೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ತಿರುಗೇಟು ನೀಡಿದರು. ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸೋಮಶೇಖರ ರೆಡ್ಡಿ ಹೇಳಿದ್ದು ಸರಿ ಅಲ್ಲ. ಕಾನೂನಿನ ಚೌಕಟ್ಟಿನಲ್ಲಿ ಮಾತನಾಡಬೇಕು. ಅವರ ಮಾತುಗಳು ಅವರ ಜ್ಞಾನವನ್ನು ತೋರಿಸುತ್ತದೆ. ಅವರು ಕೈಯಲ್ಲಿ ಖಡ್ಗ ಹಿಡಿಯುವ ಮಾತನಾಡುತ್ತಾರೆ ಬೇರೆಯವರೇನು ಬಳಿ ಹಾಕಿರುವುದಿಲ್ಲ. ನೀವು ಖಡ್ಗ ಹಿಡಿದರೆ ಇನ್ನೊಬ್ಬರು ಇನ್ನೊಂದನ್ನು ಹಿಡಿದುಕೊಂಡರೆ ದೇಶವನ್ನು ಎಲ್ಲಿಗೆ ಒಯ್ಯ ಬಯಸುತ್ತೀರಿ ? ಕೋಮು ಗಲಭೆಗಳನ್ನು ಎಬ್ಬಿಸಿ ಪ್ರಚೋದನೆ ನೀಡುವಂತಹ ಕೆಲಸವನ್ನು ಶಾಸಕರು ಮಾಡಬಾರದು. ಹಿಟ್ಲರ್ ನಂತೆ ಕೇಂದ್ರ ಸರಕಾರ ವರ್ತಿಸುತ್ತಿದೆ.ಜನಪ್ರಿಯತೆಗಾಗಿ ಹಿಟ್ಲರ್ ಮಾಡುತ್ತಿದ್ದದ್ದನ್ನು ಇವರು ಮಾಡುತ್ತಿದ್ದಾರೆ. ಇಡೀ ಮುಸ್ಲಿಂ ಸಮುದಾಯವನ್ನು ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ. ನರೇಂದ್ರ ಮೋದಿಯವರ ಈ ಕೆಲಸ ಬಹಳ ದಿನ ನಡೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Please follow and like us:
error