ಬಳ್ಳಾರಿಯಿಂದಲೇ ಕಾಂಗ್ರೆಸ್ ನ ಅಂತ್ಯ ಆರಂಭವಾಗಲಿದೆ- ಬಿ.ಶ್ರೀರಾಮುಲು

:     koppal-bjp  ಭಾರತೀಯ ಜನತಾಪಾರ್ಟಿಗೆ 70ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಇದೆ ಹೀಗಾಗಿ ಹೊಸಬರಿಗೆ ಅವಕಾಶ ನೀಡಲಾಗುತ್ತೆ. ಹಾಗಂತ ಹಳಬರನ್ನು ನಿರ್ಲಕ್ಷಿಸುವುದಿಲ್ಲ .  ಮೈಸೂರಿನಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ  ಪಕ್ಷದಲ್ಲಿದ್ದ ಹಲವಾರು ಗೊಂದಲಗಳನ್ನು ಸರಿ ಮಾಡಲಾಗಿದೆ. ಕೇಂದ್ರದ  ಮತ್ತು ರಾಜ್ಯದ ಹಿರಿಯ ನಾಯಕರು ಸೇರಿಕೊಂಡು ಗೊಂದಲವನ್ನು ಸರಿಪಡಿಸಿದ್ದಾರೆ ಎಂದು ಬಳ್ಳಾರಿಯ ಸಂಸದ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿ.ಶ್ರೀರಾಮುಲು ಹೇಳಿದರು. ಕೊಪ್ಪಳದಲ್ಲಿಂದು ಮಾತನಾಡಿದ ಬಿ.ಶ್ರೀರಾಮುಲು ಹಿಂದಿನ ಹಲವಾರು ಕಹಿ ನೆನಪುಗಳನ್ನು ಮುಂದಿಟ್ಟುಕೊಂಡು ಪಕ್ಷ ಕಟ್ಟಬೇಕಾಗಿದೆ. ಹೀಗಾಗಿ ಎಲ್ಲರೂ ಸೇರಿ ಪಕ್ಷ ಕಟ್ಟುತ್ತೇವೆ. ಈಗೋ ನಿಂದಾಗಿ ಹಲವಾರು ಸಮಸ್ಯೆಗಳು ಕಂಡು ಬರುತ್ತವೆ. ನಾಯಕನಾಗಿ ಬೆಳೆದಂತವರು ತಲೆ ಬಾಗಿಸುವುದನ್ನು ಕಲಿಯಬೇಕು ಎನ್ನುತ್ತಾರೆ.  ಇದೇ ತಿಂಗಳು 18ರಿಂದ ಬಿ.ಎಸ್.ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾರೆ. ಜೂನ್ 22 ರಂದು ಬಳ್ಳಾರಿಯಲ್ಲಿ ರಾಜ್ಯಮಟ್ಟದ ಕಾರ್ಯಕಾರಿಣಿ ನಡೆಯಲಿದೆ. ಬಳ್ಳಾರಿಯಿಂದಲೇ  ಕಾಂಗ್ರೆಸ್ ನ ಅಂತ್ಯ ಆರಂಭವಾಗಲಿದೆ. ಬ್ರಿಗೆಡ್ ಕಾರಣಕ್ಕೆ ಜನರಲ್ಲಿ ಗೊಂದಲವಾಗಬಾರದು ಎನ್ನುವುದು ಪಕ್ಷದ ನಿರ್ಣಯ. ಈಶ್ವರಪ್ಪನವರು ಕೂಡಾ ಬ್ರಿಗೇಡ್ ಬಿಡುತ್ತಾರೆ. ರಾಷ್ಟ್ರೀಯ ನಾಯಕರ ತೀರ್ಮಾನದಂತೆ ಅವರ ನಿರ್ಣಯವನ್ನು ಪಾಲಿಸುತ್ತಾರೆ. ಆಂತರಿಕ ವಿಚಾರಗಳನ್ನು ಬಹಿರಂಗವಾಗಿ ಮಾತನಾಡಬಾರದು ಎನ್ನುವ ಹಿನ್ನೆಲೆಯಲ್ಲಿ ನಾನು ಮಾತನಾಡುವುದಿಲ್ಲ. ಬ್ರಿಗೆಡ್ ನಲ್ಲೂ ಬಿಜೆಪಿ ಕಾರ್ಯಕರ್ತರೇ ಇದ್ದಾರೆ. ಹಲವಾರು ಸಂಸದರು ರಾಜ್ಯ ರಾಜಕೀಯಕ್ಕೆ ಮರಳಬೇಕು ಎನ್ನುವುದು ಜನರ ಆಪೇಕ್ಷೆಯಾಗಿದೆ  ಹೈಕಮಾಂಡ್ ನಿರ್ದಾರದಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.

Leave a Reply