ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ ಕಾಂಗ್ರೆಸ್ ಕಾರ್ಯಕರ್ತರು

ಕೊಪ್ಪಳ :

ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಭಾರತ್ ಬಂದ್ ಹಿನ್ನೆಲೆ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ ಘಟನೆ ಕಾರಟಗಿಯಲ್ಲು ನಡೆದಿದೆ.

ಅಂಗಡಿ ಮುಚ್ಚುವಂತೆ ದಬ್ಬಾಳಿಕೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೋಲಿಸರು ತಡೆದಿದ್ದಾರೆ. ಬಲವಂತವಾಗಿ ಅಂಗಡಿ ಮುಚ್ಚಿಸಲು ಅವಕಾಶ ನೀಡುವುದಿಲ್ಲ ಎಂದು ಪೋಲಿಸರು ಹೇಳಿದಾಗ ಹೊಟೇಲ್ ಮಾಲೀಕರ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ

ಅಂಗಡಿಗಳನ್ನು ನಾವು ಮುಚ್ಚಲ್ಲ ಎಂದು ಅಂಗಡಿ ಮಾಲಿಕರು ವಾಗ್ವಾದ ಮಾಡಿದ್ದಾರೆ. ಕೆಲಕಾಲ ಗೊಂದಲದ ವಾತವರಣ ಸೃಷ್ಟಿಯಾಗಿತ್ತು.