You are here
Home > Koppal News > ಬರಗಾಲ ಪೀಡಿತ ಪ್ರದೇಶ ಘೋಷಿಸಲು ಬಿಜೆಪಿ ಒತ್ತಾಯ

ಬರಗಾಲ ಪೀಡಿತ ಪ್ರದೇಶ ಘೋಷಿಸಲು ಬಿಜೆಪಿ ಒತ್ತಾಯ

ಕೊಪ್ಪಳ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಬಿಜೆಪಿ ಮುಖಂಡರು ಪ್ರತಿಭಟನೆ ಮಾಡಿದರು. ಕೊಪ್ಪಳ ನಗರದ ಬಸವೇಶ್ವರ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದ ಮುಖಂಡರು ಶೀಘ್ರವೇ ಕೊಪ್ಪಳ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು, ಗೋಶಾಲೆಗಳನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಇದರಿಂದ ಬೆಳೆ ಎಲ್ಲವೂ ಒಣಗಿ ಹಾಳಾಗಿ ಹೋಗಿದೆ ಕುಡಿಯುವ ನೀರಿಗೂ ತೊಂದರೆ ಇದೆ ಹೀಗಾಗಿ ಬರಪೀಡಿತ ಜಿಲ್ಲೆ ಘೋಷಞೆ ಮಾಡಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ.ಕೊಪ್ಪಳ ಲೋಕಸಭಾ ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ. ಹಾಲಪ್ಪ ಆಚಾರ್ಯ.ಮಾಜಿ ಶಾಸಕರಾದ ಶರಣಪ್ಪ ವಕೀಲರು. ದೊಡ್ಡನಗೌಡ ಪಾಟೀಲ್ ರಾಜು ಬಾಕಳೆ ಅಮರೇಶ ಕರಡಿ.ತೋಟಪ್ಪ ಕಾಮನೂರು.ಶಶಿಧರ ಕವಲಿ ಹಾಗೂ ಪಕ್ಷದ ಪದಾಧಿಕಾರಿಗಳು ಜನಪ್ರತಿನಿಧಿಗಳು ಭಾಗಿಯಾಗಿದ್ದರು..

Top