ಬದಲಾವಣೆ ದಿನಪತ್ರಿಕೆ ಬಿಡುಗಡೆ : ಮೀರಾ ಕುಮಾರ್ ರಿಂದ ಪ್ರಶಂಸೆ

೨: ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ ಸಂಪಾದಕತ್ವದಲ್ಲಿ ಕೊಪ್ಪಳದಿಂದ ಪ್ರಕಟಗೊಳ್ಳುತ್ತಿರುವ ಬದಲಾವಣೆ ದಿನಪತ್ರಿಕೆಯನ್ನು ಇಂದು ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಬಿಡುಗಡೆಗೊಳಿಸಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ೫ ರಾಜ್ಯಮಟ್ಟದ ಮೋಚಿಗಾರ ಸಮಾವೇಶದಲ್ಲಿ ಪತ್ರಿಕೆಯನ್ನು ಬಿಡುಗಡೆಗೊಳಿಸಿ, ಪತ್ರಿಕಾ ತಂಡಕ್ಕೆ ಶುಭ ಹಾರೈಸಿದ ಅವರು, ಪತ್ರಿಕೆಯು ಎಲ್ಲಾ ರೀತಿಯಿಂದ ಸ್ಪರ್ಧಾ ಮನೋಭಾವ ವಿಷಯ ಹೊಂದಿದೆ, ಶೋಷಿತರ ಶಕ್ತಿಯಾಗಲಿ ಎಂದರು. ಇದೇ ವೇಳೆ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಅವರು ಬದಲಾವಣೆ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ, ದಲಿತ ಸಮುದಾಯ ಶಿಕ್ಷಣದ ಜೊತೆಗೆ ಮಾಧ್ಯಮದಲ್ಲೂ ಬೆಳೆಯಬೇಕು, ಗಟ್ಟಿಯಾಘಿ ನಿಲ್ಲಬೇಕು ಎಲ್ಲರೂ ಬೆಂಬಲಿಸೋಣ ಎಂದರು. ಈ ಸಂದರ್ಭದಲ್ಲಿ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ, ಮೋಚಿ ಸಮಾಜದ ಧನಂಜಯ್, ವಿರೇಶ ತಾವರಗೇರಾ, ತಾ. ಪಂ. ಅಧ್ಯಕ್ಷ ಬಾಲಚಂದ್ರನ್, ಜೆಡಿಎಸ್ ಮುಖಂಡ ಕೆ.ಎಂ.ಸೈಯ್ಯದ್, ಬಿಜೆಪಿ ಮುಖಂಡ ನವೀನ್ ಗುಳಗಣ್ಣವರ್, ಹನುಮಂತ ಅಳವಂಡಿ, ದಾನಪ್ಪ ಕವಲೂರ, ಮಂಜುನಾಥ ಕೋಳೂರು, ಉಪ ಸಂಪಾದಕ ಬಿ.ಆರ್.ರಾಜು, ಸಂಪಾದಕ ಮಂಡಳಿಯ ಆನಂದ ಗೊಂಡಬಾಳ, ಹನುಮಂತ ನಾಯಕ ಡಂಬ್ರಳ್ಳಿ ಇತರರು ಇದ್ದರು.

Please follow and like us:
error