ಬಡ ಮುಸ್ಲಿಂ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ


ಕೊಪ್ಪಳ : ಲಾಕಡೌನ್ ನಿಂದ ಕೆಲಸವಿಲ್ಲದೇ ಸಂಕಷ್ಟಕ್ಕೊಳಗಾಗಿರುವ ಬಡ ಮುಸ್ಲಿಂ ಕುಟುಂಬಗಳಿಗೆ ಭಾಗ್ಯನಗರದ ಮುಸ್ಲಿಂ ಪಂಚ ಕಮೀಟಿಯವತಿಯಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು.
ರಮಜಾನ್ ಹಬ್ಬವೂ ಇದ್ದು ರೋಜಾ ನಡೆಯುತ್ತಿರುವ ಸಂದರ್ಭದಲ್ಲಿ ಭಾಗ್ಯನಗರದಲ್ಲಿ ನೇಕಾರಿಕೆ ಹಾಗೂ ಕೂದಲ ಸಂಸ್ಕರಣೆ ಕೆಲಸದಲ್ಲಿ ತೊಡಗಿಕೊಂಡಿದ್ದ ಕಾರ್ಮಿಕ ಕುಟುಂಬಗಳು ಕೆಲಸವಿಲ್ಲದೇ ಕಂಗಾಲಾಗಿವೆ. ಅಂತಹ ಕುಟುಂಬಗಳನ್ನು ಗುರುತಿಸಿ ಅವರಿಗೆ ನೆರವಾಗಲು ಪಂಚಕಮೀಟಿಯಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು. ಪಂಚ್ ಕಮೀಟಿಯ ಅಧ್ಯಕ್ಷ  ಇಬ್ರಾಹಿಂಸಾಬ್ ಬಿಸರಳ್ಳಿ ನೇತೃತ್ವದಲ್ಲಿ ಕಿಟ್ ಗಳ ವಿತರಣೆ ಕಾರ್ಯ ನಡೆಯಿತು.
ಈ ಸಂದರ್ಭದಲ್ಲಿ ಕಮಿಟಿಯ ಉಪಾಧ್ಯಕ್ಷ ಮೌಲಾಹುಸೇನ ಹಣಗಿ, ಪ.ಪಂ. ಸದಸ್ಯ ಹೊನ್ನೂರಸಭಾ ಬೈರಾಪೂರ, ಪೀರಸಾಬ ಬೈರಾಪೂರ, ಕಬೀರಸಾಬ, ಮೆಹಬೂಬ ಬಳಿಗಾರ, ಶರೀಪಸಾಬ, ಮರ್ದಾನಸಾಬ್, ಹಾಜಿ ಕುತ್ಬುದ್ದಿನಸಾಬ್, ಬಾಬಾ ಪಟೇಲ್, ರಶೀದಸಾಬ, ಮೆಹಬೂಬ ಹಣಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.  

Please follow and like us:
error