ಬಡ್ತಿ ಮೀಸಲಾತಿ ರಕ್ಷಣೆಗಾಗಿ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ನೌಕರರ ಹಕ್ಕು ಸಂರಕ್ಷಿಸಲು ಮನವಿ


ಕೊಪ್ಪಳ:  ಕೊಪ್ಪಳ ಜಿಲ್ಲಾಧಿಕಾರಿ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಬಡ್ತಿ ಮೀಸಲಾತಿ ರಕ್ಷಣೆಗಾಗಿ ಬೆಳಗಾವಿ ಅಧಿವೇಶನದಲ್ಲಿ ಸುಗ್ರೀವಾಜ್ಞೆ ಹೊರಡಿಸಿ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟ (ರಿ) ಜಿಲ್ಲಾ ಘಟಕ ಕೊಪ್ಪಳ ಇಂದು ಮನವಿ ಸಲ್ಲಿಸಲಾಯಿತು.
ಸರ್ಕಾರ ಎಸ್ಸಿ/ಎಸ್ಟಿ ನೌಕರರಿಗೆ ಮೀಸಲಾತಿ ನೀಡುವ ಮೂಲಕ ಉತ್ತಮ ಕಾರ್ಯ ಮಾಡುತ್ತಿದ್ದು. ದಲಿತ, ಹಿಂದುಳಿದ ಜಾತಿ ಜನಾಂಗ, ಹಾಗೂ ವರ್ಗಗಳ ಹಿತಕಾಯುತ್ತಿರುವುದು ಅಲ್ಲದೇ ಜನ ಕಲ್ಯಾಣ ಕಾರ್ಯಮಾಡುತ್ತಿದೆ. ೧೯೭೮ ರಿಂದ ಎಸ್ಸಿ/ಎಸ್ಟಿ ನೌಕರರಿಗೆ ಬಡ್ತಿ ಮೀಸಲಾತಿ ನೀಡುತ್ತಾ ಎಲ್ಲಾ ಸರ್ಕಾರಗಳು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದಿವೆ. ಬಡ್ತಿಯಲ್ಲಿ ಮೀಸಲಾತಿ ಜಾರಿಗೊಳಿಸುವುದನ್ನ ರದ್ದುಪಡಿಸಿ ೯.೨.೨೦೧೭ ರಂದು ಸುಪ್ರೀಂ ಕೋರ್ಟ ತೀರ್ಪು ನೀಡಿದ ಪ್ರಯುಕ್ತ ರಾಜ್ಯದ ವಿವಿಧ ಇಲಾಖೆಗಳಲ್ಲಿ ಬಡ್ತಿ ಪಡೆದು ಸೇವೆಸಲ್ಲಿಸುತ್ತಿರುವ ಸಮುದಾಯದ ನೌಕರರು ಹಿಂಬಡ್ತಿಯ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.
ಆದ್ದರಿಂದ ರಾಜ್ಯದಲ್ಲಿ ಬಡ್ತಿ ಮೀಸಲಾತಿ ವ್ಯವಸ್ಥೆಯನ್ನ ರಕ್ಷಿಸಿ ಮುಂದುವರೆಸಿಕೊಂಡು ಹೋಗಬೇಕೆಂದು ಮತ್ತು ದಿನಾಂಕ ೧೩.೧೧.೨೦೧೭ ರಂದು ಬೆಳಗಾವಿ ಅಧಿವೇಶನದಲ್ಲಿ ಸುಗ್ರೀವಾಜ್ಞೆ ಮಂಡಿಸಿ ಅದನ್ನು ಅನುಷ್ಠಾನಗೊಳಿಸಿ ಸಂವಿಧಾನಬದ್ಧ ಸೌಲಭ್ಯಗಳನ್ನ ಹಾಗೂ ಸೇವಾ ಭದ್ರತೆಯನ್ನ ಒದಗಿಸಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಉಮೇಶ ಪೂಜಾರ, ಪ್ರಾಣೇಶ ಪೂಜಾರ, ನಾಗರಾಜನಾಯಕ ಡೊಳ್ಳಿನ, ಹನುಮಂತಪ್ಪ ಕೊಡ್ಲಿ, ರಾಮಣ್ಣ ನಾಯಕ, ಇನ್ನಿತರರಿದ್ದರು.