ಬಡವರಿಗೆ ಕಣ್ಣು ಕೊಡುವದು ನಿತ್ಯ ಕಾರ್ತೀಕೋತ್ಸವ ಇದ್ದ ಹಾಗೆ

ಕೊಪ್ಪಳ, ೩೦-ದೇವರಿಗೆ ವರ್ಷದಲ್ಲಿ ಒಂದು ದಿನ ಅಂದರೆ ಕಾರ್ತಿಕ ಮಾಸದಲ್ಲಿ ದೀಪ ಹಚ್ಚಿ ಕಾರ್ತಿಕೋತ್ಸವ ಆಚರಿಸುತ್ತೇವೆ, ಆದರೆ ಕಣ್ಣಿಲ್ಲದ ವೃದ್ದರು ಹಾಗೂ ಕಣ್ಣಿನ ಚಿಕಿತ್ಸೆಗೆ ಒಳಪಟ್ಟವರಿಗೆ ಬೆಳಕು ನೀಡುವದು ನಿತ್ಯ ಕಾರ್ತಿಕೋತ್ಸವ ಆಚರಿಸಿದಂತೆ. ಬಾಯಾರಿಕೆಯಾದವರಿಗೆ ಕುಡಿಯಲು ನೀರು, ಹಸಿದವರಿಗೆ ಅನ್ನ ಹಾಗೂ ಕಣ್ಣಿಲ್ಲವರಿಗೆ ಆಪರೇಶನ್ ಮಾಡಿಸಿ ಬೆಳಕು ನೀಡುವದು ಒಳ್ಳೆಯ ಕೆಲಸ. ಇಂತಹ ಸಾಮಾಜಮುಖಿ ಕೆಲಸಗಳನ್ನು ಮಾಡುವದರಿಂದ ಆತ್ಮ ಸಂತೃಪ್ತಿ ದೊರೆಯಲಿದೆ ಎಂದು ಗವಿಮಠದ ಶ್ರೀ.ಜ.ಅಭಿನವ ಗವಿಸಿದ್ದೇಶ್ವರ ಶ್ರೀಗಳು ತಿಳಿಸಿದರು.
ಗ್ರಾಮದ ಶ್ರೀ ವಿವೇಕಾನಂದ ಪ್ರೌಢಶಾಲೆಯ ಆವರಣದಲ್ಲಿ ನಡೆದ ದಾಸರಡ್ಡಿ ಕುಟುಂಬವನ್ನು ಅಗಲಿದ ಹಿರಿಯರ ಸ್ಮರಣಾರ್ಥ ಆಶ್ವಿನಿ ಕಣ್ಣಿನ ಆಸ್ಪತ್ರೆ ಹೊಸಪೇಟಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕೊಪ್ಪಳ ಇವರಿಂದ ನಡೆದ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಸೋಮವಾರ ಆರ್ಶಿರ್ವಚನ ನೀಡಿದರು. ಕಾರ್ಯಕ್ರಮದ ಆಯೋಜಕ ಸುರೇಶ ದಾಸರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸ್ವಾರ್ಥದ ಭಾವನೆ ಇಲ್ಲದೆ ಸಮಾಜಮುಖಿ ಕೆಲಸ ಮಾಡುವದು ಹರಿಯುವ ನದಿಗೆ ಎದುರಾಗಿ ಇಜಿದಂತೆ. ಕಾರಣವಿಲ್ಲದೆ ಸಮಾಜಕ್ಕೆ ಉತ್ತಮ ಕೆಲಸ ಮಾಡುವವರು ವಿರಳ ಇಂತಹ ಶಕ್ತಿ ಕಡಿಮೆ ಜನರಲ್ಲಿ ಮಾತ್ರ ಇರುತ್ತದೆ ಎಂದರು.
ತಾ.ಪಂ.ಸದಸ್ಯ ಡಾ.ಸಿದ್ದಲಿಂಗಸ್ವಾಮಿಗಳು ಇನಾಮದಾರ, ಶರಣಪ್ಪಗೌಡ ಪಾಟೀಲ, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ, ಮುಖಂಡ ಅಮರೇಶ ಕರಡಿ, ಎಪಿಎಮ್‌ಸಿ ಅಧ್ಯಕ್ಷ ಹನುಮರಡ್ಡಿ ಹಂಗನಕಟ್ಟಿ, ಉಪಾಧ್ಯಕ್ಷ ಚೌಡಪ್ಪ ಜಂತ್ಲಿ, ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ, ಹೋಬಳಿ ಅಧ್ಯಕ್ಷ ರಾಮಚಂದ್ರ ಗೊಂಡಬಾಳ, ರೆಡ್‌ಕ್ರಾಸ ಸಂಶ್ಥೆಯ ಡಾ,ಶ್ರೀನಿವಾಸ ಹ್ಯಾಟಿ, ಸಂತೋಷ ದೇಶಪಾಂಡೆ, ಸುರೇಶ ದಾಸರಡ್ಡಿ, ಗ್ರಾ.ಪಂ.ಅದ್ಯಕ್ಷೆ ಫಕೀರಮ್ಮ ಜಂತ್ಲಿ, ಉಪಾಧ್ಯಕ್ಷೆ ತಿಮ್ಮವ್ವ ಗದ್ದಿಕೇರಿ, ಹಾಗೂ ರಮೇಶಗೌಡ್ರ, ಉಮೇಶಗೌಡ್ರ, ದಿ.ಜಿ.ಲಕ್ಕನಗೌಡರ, ಎ.ಟಿ.ಕಲ್ಮಠ, ಹೇಮರಡ್ಡಿ ತವದಿ, ನಾಗಪ್ಪ ಸವಡಿ, ಬಲವಂತಪ್ಪ, ಈಶಪ್ಪ ಗದ್ದಿಕೇರಿ, ದೊಡ್ಡವೀರಪ್ಪ, ಅನ್ವರ್, ಹನುಮಂತಪ್ಪ ಉಂಕಿ, ಹನುಮಂತ ಜಾಣಗಾರ, ಬಸವರಡ್ಡಿ, ಬಸವರಡ್ಡಿ, ವೆಂಕರಡ್ಡಿ ಇಮ್ಮಡಿ, ಗವಿಸಿದ್ದಪ್ಪ ಮಟ್ಟಿ, ಸಿದ್ದನಗೌಡ ಪಾಟೀಲ, ಸುರೇಶ ಕ್ವಾಗಳಿ, ರಾಮು ಬಿಸನಳ್ಳಿ, ವಿಶ್ವನಾಥ ದೋತರಗಾವಿ, ಅಶೋಕ ಬಂಡಿ, ಸುರೇಶಗೌಡ ಹಾಗೂ ಇತರರು ಇದ್ದರು.

Please follow and like us:
error