ಬಕೆಟ್ ನೀರಿನಲ್ಲಿ ಗಣೇಶನ ವಿಸರ್ಜನೆ : ಮಾದರಿಯಾದ ಗಣೇಶನ ಭಕ್ತರು

Koppal News …

ಕೊಪ್ಪಳದಲ್ಲೊಂದು ಕುಟುಂಬ ಪರಿಸರ ಸ್ನೇಹಿ ಗಣೇಶನ ಪ್ರತಿಷ್ಠಾಪಿಸಿದ್ದಲ್ಲದೇ ಬಕೆಟ್ ನೀರಿನಲ್ಲಿ ಗಣೇಶನ ವಿಸರ್ಜನೆ ಮಾಡಿ ಮಾದರಿಯಾಗಿದೆ.

ಮಂಜುನಾಥ ಡೊಳ್ಳಿನ ಹಾಗೂ ನಾಗರಾಜ ಡೊಳ್ಳಿನರ ಮನೆಯಲ್ಲಿಂದು ಪರಿಸರಸ್ನೇಹಿ ಗಣೇಶೋತ್ಸವ ಆಚರಣೆ ಹಿನ್ನೆಲೆಯಲ್ಲಿ, ಮಣ್ಣಿನಿಂದ ತಯಾರಿಸಿದ ಗಣೇಶ ಪ್ರತಿಷ್ಟಾಪಿಸಿ, ರಾತ್ರಿ ಬಕೇಟ್ ನಲ್ಲಿ ವಿಸರ್ಜನೆ ಮಾಡಲಾಯಿತು.

ವಿಗ್ರಹವು ಕರಗಿದ ಬಳಿಕ ಆ ಮಣ್ಣಿನಲ್ಲಿ ಗಿಡ ಬೆಳೆಸಲಾಗುವದು ಎಂದು ಹೇಳಿರುವ ಡೊಳ್ಳಿನ ಸಹೋದರರು ಕೆರೆ,ಬಾವಿಗಳಿಗೆ ಗಣೇಶ ವಿಗ್ರಹ,ಹೂ ,ಪ್ಲಾಸ್ಟಿಕ್ ವಸ್ತುಗಳನ್ನು ಹಾಕಿ ಮಲಿನಗೊಳಿಸುವದು,ಹೂಳು ತುಂಬಿಸುವದು ಬೇಡ ಪರಿಸರ ಸಂರಕ್ಷಣೆಯಲ್ಲಿ ನಾವೂ ಭಾಗೀಯಾಗಬೇಕಿದೆ ಎಂದಿದ್ದಾರೆ. ಬರೀ ಹೇಳುವದಷ್ಟೇ ಅಲ್ಲ ಆ ರೀತಿ ನಡೆದುಕೊಂಡು ಬೇರೆಯವರಿಗೂ ಮಾದರಿಯಾಗಿದ್ದಾರೆ