ಫೋಟೋಗ್ರಾಫಿ ಸ್ಪರ್ಧೆ : ಅಮಿತ್ ಭಾವಿಕಟ್ಟಿಗೆ ಬಂಗಾರದ ಪದಕ

ಕೊಪ್ಪಳ : ಬೆಂಗಳೂರು ಮೂಲದ ಯೂಥ್ ಪೋಟೋಗ್ರಾಫಿಕ್ ಸೊಸೈಟಿಯವರು ಹಮ್ಮಿಕೊಂಡಿದ್ದ 36ನೇ ಅಖಿಲ ಭಾರತ ಡಿಜಿಟಲ್ ಸಲೋನ್ 2018ರ ಸ್ಪರ್ಧೆಯಲ್ಲಿ ಕೊಪ್ಪಳ ಮೂಲದ ಅಮಿತ್ ಭಾವಿಕಟ್ಟಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ತಮ್ಮ ಪೀಪಿಂಗ್ ಬ್ಲಾಕ್ ಫ್ಯಾಂಥರ್ ಎನ್ನುವ ಚಿತ್ರಕ್ಕೆ ಎಫ್ ಐಪಿ ಗೋಲ್ಡ್ ಆವಾರ್ಡನ್ನು ಪಡೆದುಕೊಂಡಿದಾರೆ. ಸ್ಪರ್ದೆಯಲ್ಲಿ 290ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. 2902 ಚಿತ್ರಗಳು ಸ್ಪರ್ದೆಯಲ್ಲಿದ್ದವು. ಬೆಂಗಳೂರಿನ ವೆಂಕಟಪ್ಪ ಆರ್ಟ ಗ್ಯಾಲರಿಯಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೆಶಕ ಓಂ ಸಾಯಿ ಪ್ರಕಾಶ, ಯುವಜನಸೇವಾ ಕ್ರೀಡಾ ಇಲಾಖೆಯ ಕಮಿಷನ್ರ್ ಕೆ.ಶ್ರೀನಿವಾಸ ಪ್ರಶಸ್ತಿ ಪ್ರದಾನ ಮಾಡಿದರು. ಕಾಂಗ್ರೆಸ್‍ನ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಇಂದಿರಾ ಭಾವಿಕಟ್ಟಿಯವರ ಸುಪುತ್ರ , ವೃತ್ತಿಯಲ್ಲಿ ಸಾಪ್ಟವೇರ್ ಇಂಜನಿಯರ್ ಆಗಿರುವ ಅಮಿತ್ ಭಾವಿಕಟ್ಟಿ ಪ್ರವೃತ್ತಿಯಲ್ಲಿ ನ್ಯಾಚುರಲ್ ಹಿಸ್ಟರಿ ಪೋಟೋಗ್ರಾಫರ್ ಎಂದು ಗುರುತಿಸಿಕೊಂಡವರು. ತಮ್ಮ ಚಿತ್ರಗಳ ಮೂಲಕ ವನ್ಯಜೀವಿಗಳ ಸಂರಕ್ಷಣೆ ಸಂದೇಶ ಸಾರುತ್ತಿರುವವರು. ವನ್ಯಜೀವಿ ಛಾಯಾಗ್ರಹಣದ ಬಗ್ಗೆ ತೀವ್ರ ಆಸಕ್ತಿ ಹೊಂದಿರುವ ಅಮಿತ್ ಹೀಗಾಗಲೇ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಿಂಗಾಪೂರ, ರೊಮೆನಿಯಾ ಸೇರಿದಂತೆ ಹಲವಾರು ರಾಷ್ಟ್ರಗಳ ಪತ್ರಿಕೆಗಳಲ್ಲಿ ಇವತ ಛಾಯಾಚಿತ್ರಗಳು ಪ್ರಕಟಗೊಂಡು ಪ್ರಶಂಸೆಪಡೆದಿವೆ. ಸ್ಯಾಂಚುರಿ ಎಷಿಯಾ ( ಎಷಿಯಾದ ನಂ 1 ಪತ್ರಿಕೆ)ಯಲ್ಲೂ ಸಹ ಹಲವಾರು ಛಾಯಾಚಿತ್ರಗಳು ಪ್ರಕಟಗೊಂಡಿವೆ. ನಿರಂತರವಾಗಿ ವಿಶ್ವದಾದ್ಯಂತ ಪ್ರವಾಸ ಮಾಡುತ್ತ ವನ್ಯಜೀವಿಗಳಿಗೆ ಸಂಬಂಧಪಟ್ಟಂತೆ ಛಾಯಾಚಿತ್ರಗಳನ್ನು ಮತ್ತು ಡಾಕ್ಯುಮೆಂಟರಿಗಳನ್ನು ಮಾಡುತ್ತಿದ್ದಾರೆ. ಅಮಿತ್ ಭಾವಿಕಟ್ಟಿಯವರ ಸಾಧನೆಗೆ ಸ್ನೇಹಿತರು, ಬಂಧುಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

Please follow and like us:
error