ಫೇಸ್ ಬುಕ್ ಸ್ನೇಹಿತನಿಗೆ ನೆರವಾದ ಕೊಪ್ಪಳದ ಯುವಕರು

Koppal ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ ಯುವಕನಿಗೆ ಕೊಪ್ಪಳದ ಕ್ರಿಕೆಟ್ ಆಟಗಾರರು ನೆರವಾಗಿದ್ದಾರೆ. ಕೊಪ್ಪಳ ಕ್ರಿಕೆಟ್ ಆಟಗಾರರು ಸ್ಥಳೀಯರಿಗೆ ಆಹಾರದ ಕಿಟ್ ವಿತರಿಸುವುದರ ಮೂಲಕ ಸಹಾಯ ಮಾಡುತ್ತಿರುವುದನ್ನ ಕಂಡ ದೊಡ್ಡಬಳ್ಳಾಪುರದ ಯುವಕ ತನ್ನವರ ಅಸಹಾಯಕತೆಯನ್ನು ತೋಡಿಕೊಂಡು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾನೆ. ಕೂಡಲೇ ಇದಕ್ಕೆ ಸ್ಪಂದಿಸಿದ ಸೈಯದ್ ಮೆಹಮೂದ್ ಬಲ್ಲೆ ಮತ್ತು ಇತರ ಸ್ನೇಹಿತರು ಅವರಿಗೆ ಆಹಾರದ ಕಿಟ್ ಗಳನ್ನು ಬಸ್ ಮೂಲಕ ಕಳಿಸಿದ್ದಾರೆ. ಕೇವಲ ಸಮಯ ಕಳೆಯುವುದಕ್ಕಷ್ಟೇ ಅಲ್ಲ ಪರಸ್ಪರ ಸಹಾಯ ಮಾಡುವುದಕ್ಕೂ ಫೇಸ್ ಬುಕ್ ನೆರವಾಗಬಲ್ಲದು ಎನ್ನುವುದನ್ನು ಕೊಪ್ಪಳದ ಯುವಕರು ತೋರಿಸಿಕೊಟ್ಟಿದ್ದಾರೆ.

Please follow and like us:
error