ಫೆ. ೨೮ ರಂದು ಕೇಂದ್ರ ಬರ ಅಧ್ಯಯನ ತಂಡ ಕೊಪ್ಪಳ ಜಿಲ್ಲೆಗೆ ಭೇಟಿ

ಕೊಪ್ಪಳ ಫೆ. : : ಹಿಂಗಾರು ಹಂಗಾಮು ಬೆಳೆ ಹಾನಿ ಕುರಿತು ಕೇಂದ್ರ ಬರ ಅಧ್ಯಯನ ತಂಡವು ಫೆ. ೨೮ ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ, ಬೆಳೆಹಾನಿ ಸಂಭಂದಿಸಿದಂತೆ ಪರಿಶೀಲನೆ ನೆಡೆಸಲಿದೆ.
ಅಭಿಲಾಷ ಲಿಖಿ, ಬಿ.ಕೆ. ಶ್ರೀವಾಸ್ತವ್ ಹಾಗೂ ಎಸ್.ಸಿ. ಶರ್ಮಾ ಅವರ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡವು ಫೆ. ೨೮ ರಂದು ಗದಗ ಜಿಲ್ಲೆಯ ಮುಂಡರಗಿ ಮೂಲಕ ರಘುನಾಥನ ಹಳ್ಳಿಯಿಂದ ಮಧ್ಯಾನ ೦೨-೪೫ ಗಂಟೆಗೆ ಕೊಪ್ಪಳ ಜಿಲ್ಲೆಗೆ ಆಗಮಿಸಿ, ತಾಲೂಕಿನ ಅಳವಂಡಿ ಗ್ರಾಮದಲ್ಲಿ ಮೇವು ಬ್ಯಾಂಕ್, ಗೋಶಾಲೆ ಹಾಗೂ ಬೆಳೆ ನಷ್ಟ ವಿಕ್ಷಣೆಮಾಡುವರು. ೦೩-೩೦ಕ್ಕೆ ಮೈನಳ್ಳಿ ಕುಡಿಯುವ ನೀರಿನ ಕಾಮಗಾರಿ ಪೂರೈಕೆ ವಿಕ್ಷಣೆ, ೦೪ ಗಂಟೆಗೆ ಹಿರೇಸಿಂದೋಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಂದ್ರಾಳ ಉದ್ಯೋಗ ಖಾತ್ರಿಯಡಿ ಹೂಳೆತ್ತೂವ ಕಾಮಗಾರಿ ಪರಿಶೀಲನೆ. ನಂತರ ೦೪-೩೦ಕ್ಕೆ ವದಗನಾಳ ಕುಡಿಯುವ ನೀರಿನ ಪೂರೈಕೆ ಕಾಮಗಾರಿ ವಿಕ್ಷಣೆಮಾಡುವರು. ಸಂಜೆ ೦೫ ಗಂಟೆಗೆ ಹಲಗೇರಿ ಗ್ರಾಮದ ಕುಡಿಯುವ ನೀರಿನ ಕಾಮಗಾರಿ ವಿಕ್ಷಿಸಿ, ನಂತರ ೫-೩೦ಕ್ಕೆ ಕೊಪ್ಪಳ ಆಗಮಿಸಿ ಬರ ಬಗ್ಗೆ ಅಧಿಕಾರಿಗಳೊಂದಿಗೆ ಕೊಪ್ಪಳ ಪ್ರವಾಸಿ ಮಂದಿರದಲ್ಲಿ ಚರ್ಚೆ ನೆಡೆಸುವರು ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯವು ಪ್ರಕಟನೆಯಲ್ಲಿ ತಿಳಿಸಿದೆ.