ಪ.ಜಾತಿ, ಪ.ವರ್ಗ- ಹಿಂದುಳಿದವರಿಗೆ ಜನಸಂಖ್ಯೆ ಆಧರಿಸಿ 70% ಮೀಸಲಾತಿ ಕಲ್ಪಿಸಲು ಚಿಂತನೆ – ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದವರಿಗೆ ಜನಸಂಖ್ಯೆ ಆಧರಿಸಿ 70 ಮೀಸಲಾತಿ ಕಲ್ಪಿಸಲು ಚಿಂತನೆ ನಡೆಸುತ್ತಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಅವರು, ತಮಿಳುನಾಡು ಮಾದರಿಯಲ್ಲಿ ಶೇ ಮತ್ತು  ಜಾತಿ ಗಣತಿ ಕುರಿತ ಕಾಂತರಾಜ ಆಯೋಗದ ವರದಿಯನ್ನು ಬರುವ ಅಧಿವೇಶನದಲ್ಲಿ ಮಂಡಿಸಲು ಚಿಂತನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಮೀಸಲಾತಿ ಪ್ರಮಾಣ ಹೆಚ್ಚಳ ವಿಷಯವಾಗಿ ಸಂವಿಧಾನ ತಿದ್ದುಪಡಿಗೆ ನಮ್ಮ ಸರಕಾರದ ಕಾಯ್ದೆಯಿಂದಲೇ ಚಾಲನೆ ಸಿಗುವಂತಾಗಲಿ. ಅದೇ ರೀತಿ ಸಂವಿಧಾನ ತಿದ್ದುಪಡಿಗೆ ಕೇಂದ್ರದ ಮನವೊಲಿಸಲು ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ ನಾಯಕತ್ವ ವಹಿಸಬೇಕಾಗುತ್ತದೆ ಎಂದರಲ್ಲದೆ, ಜಾತಿ ಗಣತಿ ಕುರಿತು ಕಾಂತರಾಜ್‌ ಆಯೋಗದ ವರದಿ ಡಿಸೆಂಬರ್‌ ಇಲ್ಲವೆ ಜನವರಿಯಲ್ಲಿ ಸರಕಾರಕ್ಕೆ ಸಲ್ಲಿಕೆಯಾಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.ಮೀಸಲಾತಿ ಪ್ರಮಾಣ ಒಟ್ಟಾರೆ ಶೇ. 50 ಮೀರಬಾರದು ಎಂದು ಸುಪ್ರೀಂಕೋರ್ಟ್‌ ತೀರ್ಪು ಇದೆ. ಇನ್ನೊಂದೆಡೆ ತಮಿಳುನಾಡು ಸರಕಾರ ಮೀಸಲು ಪ್ರಮಾಣವನ್ನು ಶೇ. 69ಕ್ಕೆ ಹೆಚ್ಚಿಸಿ ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಮೀಸಲು ಪ್ರಮಾಣವನ್ನು ಶೇ. 70ಕ್ಕೆ ಹೆಚ್ಚಿಸಲು ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದರು.

Please follow and like us:
error