ಪ್ಲೇ & ಲರ್ನ ಸ್ಕೂಲ್‌ನ ಶಾಲಾ ವಾರ್ಷಿಕೋತ್ಸವ

ಕೊಪ್ಪಳ, ೧೪-ಜ. ೧೨ ಶನಿವಾರದಂದು ದಿ. ಶ್ರೀಮತಿ ಮಹಾಂತಮ್ಮ ಸಂಗಣ್ಣ ಗಡಾದ ಶೆಟ್ಟರ್ ಮೆಮೋರಿಯಲ್ ಟ್ರಸ್ಟ್‌ನ ಅಡಿಯಲ್ಲಿ ಸ್ಥಾಪನೆಯಾದ ಪ್ಲೇ & ಲರ್ನ ಸ್ಕೂಲ್‌ನ ಶಾಲಾ ವಾರ್ಷಿಕೋತ್ಸವ ಆಚರಿಸಲಾಯಿತು.
ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಚಿಕ್ಕ ಮಕ್ಕಳ ತಜ್ಞರಾದ ಡಾ. ಅಜಯ ಬಾಚಲಾಪುರ ಉದ್ಘಾಟಿಸಿ ಮಾತನಾಡಿ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡದಿರಲು ಹಾಗೂ ಶಿಕ್ಷಣ, ಆರೋಗ್ಯ ಬಗ್ಗೆ ಕಾಳಜಿ ವಹಿಸಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷರಾದ ರಾಜಶೇಖರ ಅಂಗಡಿ, ತಾಲೂಕಾಧ್ಯಕ್ಷರು ಏUSಒಂ ಕೊಪ್ಪಳ ಶಿವಕುಮಾರ ಕುಕನೂರ, ಕೊಪ್ಪಳ ಮೀಡಿಯಾ ಕ್ಲಬ್ ಜಿಲ್ಲಾಧ್ಯಕ್ಷರಾದ ಸಂತೋಷ ದೇಶಪಾಂಡೆ, ನರಸಭೆ ಸದಸ್ಯರುಗಳಾದ ರಾಜಶೇಖರ ಆಡೂರ, ವಿದ್ಯಾ ಹೆಸರೂರ, ಬಸಮ್ಮ ದಿವಟರ, ಹಾಗೂ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಶಿರಗುಂಪಿ ಶೆಟ್ಟರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಮಾನಸ ಮತ್ತು ತನುಜ ಪ್ರಾರ್ಥಿಸಿದರು, ಶಿಕ್ಷಕಿಯರಾದ ಶಾರದಾ ಕೊರಗಲ್ ನಿರೂಪಿಸಿದರು, ಶ್ರೀಮತಿ ರೇಖಾ ಶಿರಗುಂಪಿ ಶೆಟ್ಟರ್ ಸ್ವಾಗತಿಸಿದರು, ಕು. ಶಬಾನಾ ಗುಳೇಕರ್ ವಂದಿಸಿದರು.

Please follow and like us:
error