You are here
Home > Election_2018 > ಪ್ಲಾಪ್ ಪರಣ್ಣ : ಮೂರೇ ತಿಂಗಳಲ್ಲಿ ಮತದಾರರಿಂದ ರಿಜೆಕ್ಟ್ !

ಪ್ಲಾಪ್ ಪರಣ್ಣ : ಮೂರೇ ತಿಂಗಳಲ್ಲಿ ಮತದಾರರಿಂದ ರಿಜೆಕ್ಟ್ !

ಗಂಗಾವತಿ : ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಕೊನೆಗೂ ಬಂದಿದೆ‌ . ಗಂಗಾವತಿಯ ಚುನಾವಣಾ ಫಲಿತಾಂಶ ಅಧಿಕಾರರೂಡ ಶಾಸಕರಿಗೆ ತೀವ್ರ ಮುಖಭಂಗ ಉಂಟಾಗುವಂತೆ ಮಾಡಿದೆ. ಕೇವಲ ಮೂರು ತಿಂಗಳ ಹಿಂದೆ ಆಯ್ಕೆಯಾದ ಪರಣ್ಣ ಮುನವಳ್ಳಿ ಗಂಗಾವತಿಯ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಂಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಸೋಲಿಸಿ ಅಧಿಕಾರದ ಗದ್ದುಗೆ ಏರಿದ್ದ ಶಾಸಕ ಪರಣ್ಣ ಮುನವಳ್ಳಿ ಗಂಗಾವತಿ ನಗರಸಭೆಯ ಅಧಿಕಾರ ಹಿಡಿಯುವಲ್ಲಿ ವಿಫಲರಾಗಿದ್ದಾರೆ.

ಇದು ಅವರ ಅಭಿಮಾನಿಗಳಲ್ಲಿ ತೀವ್ರ ತೆರನಾದ ನಿರಾಸೆ ಮೂಡಿಸಿದೆ.ಧಾನ ಸಭಾ ಚುನಾವಣೆಯಲ್ಲಿ ಗಂಗಾವತಿ ನಗರದಲ್ಲಿಯೂ ಉತ್ತಮ ಮತಗಳನ್ನು ಪಡೆದಿದ್ದ ಮುನವಳ್ಳಿ ಕೈಯಿಂದ ಅಧಿಕಾರ ತಪ್ಪಿದೆ.‌ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದ ಮುನವಳ್ಳಿ ಅದೇ ಗೆಲುವನ್ನು ರಿಪೀಟ್ ಮಾಡುವಲ್ಲಿ ವಿಫಲರಾಗಿದ್ದಾರೆ. ಇಡೀ ಜಿಲ್ಲೆಯಲ್ಲಿ ಆಯಾ ಕ್ಷೇತ್ರದ ಶಾಸಕರು ಮೇಲುಗೈ ಸಾಧಿಸಿದರೆ ಗಂಗಾವತಿಯಲ್ಲಿ ಮಾತ್ರ ಉಲ್ಟಾ ಆಗಿದೆ. ಯಲಬುರ್ಗಾದಲ್ಲಿ ಬಿಜೆಪಿಗೆ ಬಹುಮತ, ಕುಷ್ಟಗಿ, ಕೊಪ್ಪಳದಲ್ಲಿ ಕಾಂಗ್ರೆಸ್ ಶಾಸಕರು ಇರುವಲ್ಲಿ ಕಾಂಗ್ರೆಸ್ ಗೆ ಬಹುಮತ ಬಂದಿದೆ. ಆದರೆ ಬಿಜೆಪಿ ಶಾಸಕರಿರುವ ಗಂಗಾವತಿಯಲ್ಲಿ ಕಾಂಗ್ರೆಸ್ ನ ಇಕ್ಬಾಲ್ ಅನ್ಸಾರಿ ಪ್ರಾಬಲ್ಯ ಮೆರೆದಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರಲ್ಲಿ ಮತ್ತು ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ‌

Top